ಗುರುವಾರ , ಮೇ 13, 2021
17 °C

ಟೆನಿಸ್: ಗಂಧರ್ವ, ಹರ್ಷಿಣಿ ಫೈನಲ್‌ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕದ ನಾಲ್ಕನೇ ಶ್ರೇಯಾಂಕಿತ ಗಂಧರ್ವ ಜಿ.ಕೆ ಮತ್ತು ಅಗ್ರ ಶ್ರೇಯಾಂಕಿತೆ ಹರ್ಷಿಣಿ ಎನ್ ಅವರು ಎಂಎಟಿ–ಎಐಟಿಎ 14 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದ ಫೈನಲ್ ಪ್ರವೇಶಿಸಿದರು.

ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಗಂಧರ್ವ 6-2, 6-1ರಲ್ಲಿ ನಿಖಿಲ್ ಶ್ರೀನಿವಾಸ್ ಎದುರು ಗೆಲುವು ಸಾಧಿಸಿದರೆ ಹರ್ಷಿಣಿ ನಾಲ್ಕನೇ ಶ್ರೇಯಾಂಕದ ದೇವಾಂಶಿ ಪ್ರಭು ದೇಸಾಯಿ ಅವರನ್ನು 6-2, 6-1ರಲ್ಲಿ ಮಣಿಸಿದರು.

ಬಾಲಕರ ವಿಭಾಗದ ಮತ್ತೊಂದು ಸೆಮಿಫೈನಲ್‌ನಲ್ಲಿ ತಮಿಳುನಾಡಿನ ನವೀನ್ ಸುಂದರಂ 6-3, 6-1ರಲ್ಲಿ ಶ್ರೀಕರ್ ದೋನಿ ವಿರುದ್ಧ ಜಯ ಗಳಿಸಿದರೆ, ಬಾಲಕಿಯರ ವಿಭಾಗದ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಆನ್ವಿ ಪುನೆಗಂಟಿ 6-4, 6-2ರಲ್ಲಿ ಸಾಯಿ ಅರಣ್ಯ ವಿರುದ್ಧ ಗೆಲುವು ಸಾಧಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು