ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದ್ರ ಕಿನಾರೆಯಲ್ಲಿ ಬಾಲಕಿಯರ ’ಪಂಚ್’

Last Updated 22 ಮೇ 2020, 19:30 IST
ಅಕ್ಷರ ಗಾತ್ರ

ಗಾಜಾ: ಕೊರೊನಾ–19 ಹಾವಳಿಯಿಂದಾಗಿ ಬಹುತೇಕ ಕಡೆಗಳಲ್ಲಿ ಬಂದ್; ಕ್ರೀಡಾ ಚಟುವಟಿಕೆ ಸ್ಥಗಿತ. ಆದರೆ ಇಲ್ಲಿನ ಸಮುದ್ರ ಕಿನಾರೆಯಲ್ಲಿ ಗ್ಲೌಸ್ ತೊಟ್ಟ ಪುಟ್ಟ ಕೈಗಳು ತೋಳು ಮುಂದಕ್ಕೆ ಚಾಚಿ ಪಂಚ್ ಮಾಡುತ್ತಿರುವುದು ಗಮನ ಸೆಳೆಯುತ್ತಿದೆ. ಅಲೆಗಳ ಸದ್ದಿನ ನಡುವೆ ಈ ರೀತಿ ಬಾಕ್ಸಿಂಗ್ ಅಭ್ಯಾಸ ಮಾಡುತ್ತಿರುವುದು ಇಲ್ಲಿನ ಬಾಲಕಿಯರು. ಇವರಲ್ಲಿ ನಾಲ್ಕು ವರ್ಷದವರೂ ಸೇರಿರುವುದು ವಿಶೇಷ. ‌

ಕ್ರೀಡಾ ಚಟುವಟಿಕೆ ಹೆಚ್ಚಾಗಿ ಪುರುಷರಿಗೇ ಸೀಮಿತವಾಗಿರುವ ಇಲ್ಲಿ ಕೊರೊನಾ ಕರಿನೆರಳಿನ ನಡುವೆಯೂ ಬಾಲಕಿಯರು ಕ್ರೀಡೆಯ ಅಭ್ಯಾಸದಲ್ಲಿ ತೊಡಗಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯತ್ತ ಗಮನ ಹರಿಸಲು ನೆರವಾಗಲಿದೆ ಎಂಬುದು ಕೋಚ್ ಒಸಾಮ ಆಯೂಬ್ ಅಭಿಪ್ರಾಯ.

‘ಈ ದಾರಿಯಾಗಿ ಹಾದುಹೋದ ಕೆಲವರು ತಮ್ಮ ಮಕ್ಕಳನ್ನೂ ತರಬೇತಿಗೆ ಕಳುಹಿಸಬಹುದೇ ಎಂದು ಕೇಳಿದ್ದಾರೆ. ಅದು ನನ್ನನ್ನು ಪುಳಕಗೊಳಿಸಿದೆ’ ಎಂದು ಅವರು ಹೇಳಿದ್ದಾರೆ.

15 ವರ್ಷದ ಬಾಕ್ಸರ್ ಮಲಕ್ ಮೆಸ್ಲಿ ‘ಕ್ಲಬ್‌ನಲ್ಲಿ ಅಭ್ಯಾಸಕ್ಕಾಗಿ ಒಟ್ಟು ಸೇರುವುದರಿಂದ ಕೊರೊನಾ ವೈರಾಣು ಸೋಂಕುವ ಸಾಧ್ಯತೆ ಹೆಚ್ಚು ಇದೆ. ಆದ್ದರಿಂದ ಹೊರ ಆವರಣದಲ್ಲಿ ಅಭ್ಯಾಸ ಮಾಡಲು ನಿರ್ಧರಿಸಿದ್ದೇವೆ’ ಎಂದು ಅಭಿಪ್ರಾಯಪಟ್ಟರು.

ಗಾಜಾದಲ್ಲಿ ಈ ವರೆಗೆ 55 ಮಂದಿಗೆ ಕೊರೊನಾ ಇರುವುದಾಗಿ ದೃಢಪಟ್ಟಿದ್ದು ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಲಾಕ್‌ಡೌನ್ ಘೋಷಿಸದಿದ್ದರೂ ಶಾಲೆ, ಸಭಾಂಗಣಗಳು ಮತ್ತು ಜಿಮ್‌ಗಳನ್ನು ಮುಚ್ಚಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT