ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದೀಪನಾ ಮದ್ದು ಸೇವನೆ: ಗೋಮತಿ ಮೇಲ್ಮನವಿ

Last Updated 2 ಆಗಸ್ಟ್ 2020, 15:42 IST
ಅಕ್ಷರ ಗಾತ್ರ

ಚೆನ್ನೈ:ಉದ್ದೀಪನಾ ಮದ್ದು ಸೇವಿಸಿರುವುದು ಸಾಬೀತಾಗಿರುವ ಕಾರಣ ನಾಲ್ಕು ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿರುವ ಭಾರತದ ಅಥ್ಲೀಟ್‌ ಗೋಮತಿ ಮಾರಿಮುತ್ತು ಅವರು ತೀರ್ಪಿನ ವಿರುದ್ಧ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ (ಸಿಎಎಸ್‌) ಮೇಲ್ಮನವಿ ಸಲ್ಲಿಸಿದ್ದಾರೆ.

ಅಥ್ಲೀಟ್‌ ಗೋಮತಿ ಮಾರಿಮುತ್ತು ಮೇಲೆ ಅಥ್ಲೆಟಿಕ್ಸ್ ಇಂಟಿಗ್ರಿಟಿ ಯೂನಿಟ್‌ (ಎಐಯು) ನಾಲ್ಕು ವರ್ಷಗಳ ನಿಷೇಧ ಹೇರಿತ್ತು. ಹೀಗಾಗಿ 2019ರಲ್ಲಿ ದೋಹಾ ಏಷ್ಯನ್‌ ಕ್ರೀಡಾಕೂಟದ 800 ಮೀಟರ್ಸ್‌ ಓಟದಲ್ಲಿ ಅವರು ಗೆದ್ದ ಚಿನ್ನದ ಪದಕವನ್ನು ಕಳೆದುಕೊಂಡಿದ್ದರು.

‘ನಿಯಮಗಳ ಪ್ರಕಾರ ಸಿಎಎಸ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದೇನೆ. ನನ್ನ ಮೇಲೆ ಹೇರಲಾಗಿರುವ ನಾಲ್ಕು ವರ್ಷಗಳ ನಿಷೇಧ ಹಾಗೂ ವಿಧಿಸಲಾಗಿರುವ ₹ 98,000 ದಂಡದ ನಿರ್ಣಯವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದೇನೆ‘ ಎಂದು ಗೋಮತಿ ತಿಳಿಸಿದ್ದಾರೆ.

ತಮಿಳುನಾಡಿನ 31 ವರ್ಷ ವಯಸ್ಸಿನ ಗೋಮತಿ ಅವರಿಂದ ಮೂತ್ರದ ಮಾದರಿಯನ್ನು ಕತಾರ್‌ನಲ್ಲಿ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ ಕೂಟದಲ್ಲಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ ನಿಷೇಧಿತ ಮದ್ದಿನ ಅಂಶ ಪತ್ತೆಯಾಗಿತ್ತು.2019ರ ಮೇ 17ರಿಂದಲೇ ನಿಷೇಧ ಶಿಕ್ಷೆ ಜಾರಿಯಾಗಿದ್ದು, 2023ರ ಮೇ 16ಕ್ಕೆ ಇದು ಅಂತ್ಯಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT