ಭಾನುವಾರ, ಮೇ 9, 2021
27 °C
ಕಾಮನ್‌ವೆಲ್ತ್‌ ಶೂಟಿಂಗ್‌ ಮತ್ತು ಆರ್ಚರಿ ಸ್ಪರ್ಧೆಗಳ ಆಯೋಜನೆ

ಸರ್ಕಾರದಿಂದ ಐಒಎಗೆ ಹಸಿರು ನಿಶಾನೆ

ಪಿಟಿಐ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಭಾರತದಲ್ಲಿ ಕಾಮನ್‌ವೆಲ್ತ್ ಶೂಟಿಂಗ್‌ ಮತ್ತು ಆರ್ಚರಿ ಸ್ಪರ್ಧೆಗಳ ಆಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ.

‘2022ರ ಮಾರ್ಚ್‌ನಲ್ಲಿ ಸ್ಪರ್ಧೆಗಳನ್ನು ಆಯೋಜಿಸಲು ಅನುಮತಿ ನೀಡುವಂತೆ ಭಾರತ ಒಲಿಂಪಿಕ್‌ ಸಂಸ್ಥೆಯು (ಐಒಎ) ಹೊಸ ವರ್ಷದ ಮೊದಲ ದಿನವೇ ಪತ್ರ ಬರೆದಿತ್ತು. ಐಒಎ ಪ್ರಸ್ತಾವಕ್ಕೆ ನಾವು ಒಪ್ಪಿಗೆ ನೀಡಿದ್ದೇವೆ’ ಎಂದು ಕೇಂದ್ರ ಕ್ರೀಡಾ ಸಚಿವಾಲಯ ಶನಿವಾರ ಹೇಳಿದೆ.

ಶೂಟಿಂಗ್ ಮತ್ತು ಆರ್ಚರಿ ಸ್ಪರ್ಧೆಗಳನ್ನು ಆಯೋಜಿಸಲು ತಗಲುವ ವೆಚ್ಚದ ಕುರಿತು ಐಒಎ ಶುಕ್ರವಾರ ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಷನ್‌ (ಸಿಜಿಎಫ್‌) ಅಧ್ಯಕ್ಷ ಡೇಮ್‌ ಲೂಯಿಸ್‌ ಮಾರ್ಟಿನ್‌ ಅವರಿಗೆ ಪತ್ರ ಬರೆದಿತ್ತು. 2026 ಅಥವಾ 2030ರ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಆತಿಥ್ಯವಹಿಸಲು ಆಸಕ್ತಿ ಹೊಂದಿರುವುದಾಗಿಯೂ ಈ ಪತ್ರದಲ್ಲಿ ಉಲ್ಲೇಖಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು