ಶುಕ್ರವಾರ, ಜನವರಿ 22, 2021
28 °C

ಅಮಗೊಂಡ ‘ಹಂಪಿ ವೀರ ಕೇಸರಿ’

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಮಲಪನಗುಡಿ (ಹೊಸಪೇಟೆ ತಾಲ್ಲೂಕು): ‘ಹಂಪಿ ಉತ್ಸವ’ದ ಪ್ರಯುಕ್ತ ಶನಿವಾರ ಇಲ್ಲಿ ಹಮ್ಮಿಕೊಂಡಿದ್ದ ಕುಸ್ತಿ ಸ್ಪರ್ಧೆಯಲ್ಲಿ ಅತ್ಯುತ್ತಮ ಪಟ್ಟುಗಳೊಂದಿಗೆ ಬೆಳಗಾವಿಯ ಬಿರೇಶ್‌ ಅವರನ್ನು ಮಣಿಸಿ, ವಿಜಯಪುರದ ಅಮಗೊಂಡ ಅವರು ‘ಹಂಪಿ ವೀರ ಕೇಸರಿ’ ಬಿರುದಿಗೆ ಪಾತ್ರರಾದರು.

74 ಕೆ.ಜಿ.ಗಿಂತ ಹೆಚ್ಚಿನ ತೂಕದ ಸ್ಪರ್ಧೆಯಲ್ಲಿ ಅಮಗೊಂಡ ಈ ಸಾಧನೆ ಮಾಡಿದರು. ಬಿರೇಶ್‌ ದ್ವಿತೀಯ ಹಾಗೂ ದಾವಣಗೆರೆಯ ಪಂಕಜ್‌ ಕುಮಾರ್‌ ತೃತೀಯ ಬಹುಮಾನಕ್ಕೆ ತೃಪ್ತರಾದರು.

74 ಕೆ.ಜಿ. ವಿಭಾಗದಲ್ಲಿ ಗದಗಿನ ಪಾಲಾಕ್ಷಗೌಡ, ದಾವಣಗೆರೆಯವರಾದ ಅನಿಲ್‌ ದಳವಾಯಿ ಹಾಗೂ ವೆಂಕಟೇಶ್‌ ಜಗನ್ನಾಥ್‌ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದರು.

54 ಕೆ.ಜಿ. ವಿಭಾಗದಲ್ಲಿ ಗದಗಿನ ಪ್ರಶಾಂತ ಗೌಡ ಪ್ರಥಮ, ಹರಪನಹಳ್ಳಿಯ ಕೊರವರ ಸಂಜೀವ ದ್ವಿತೀಯ ಹಾಗೂ ದಾವಣಗೆರೆಯ ಬಿ.ಎಸ್‌. ಪ್ರತೀಕ್‌ ತೃತೀಯ ಸ್ಥಾನ ಪಡೆದರು.

61 ಕೆ.ಜಿ. ವಿಭಾಗದಲ್ಲಿ ದಾವಣಗೆರೆಯ ಪ್ರಭಾಕರ್‌ ಫಾಲ್ಕೆ, ಬೆಳಗಾವಿಯ ಮುರುಗೇಶ್‌ ತಮಡಿ ಹಾಗೂ ದಾವಣಗೆರೆಯ ಎಂ. ಲಕ್ಷ್ಮಣ್‌ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು.

65 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯವರಾದ ಕಾರ್ತಿಕ್‌ ಹಿತ್ತಾಂಗಿ, ಶಿವಾನಂದ ತಳವಾರ ಕ್ರಮವಾಗಿ ಪ್ರಥಮ, ದ್ವಿತೀಯ ಬಹುಮಾನ ಗಳಿಸಿದರೆ, ದಾವಣಗೆರೆಯ ಮಂಜುನಾಥ ತೃತೀಯ ಸ್ಥಾನ ಪಡೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು