ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌: ಹೊರಬಿದ್ದ ಹರಿಕೃಷ್ಣ

Last Updated 23 ಜೂನ್ 2020, 9:09 IST
ಅಕ್ಷರ ಗಾತ್ರ

ಚೆನ್ನೈ: ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಪೆಂಟಾಲ ಹರಿಕೃಷ್ಣ ಅವರು ಮ್ಯಾಗ್ನಸ್‌ ಕಾರ್ಲ್‌ಸನ್‌ ಟೂರ್‌ನ ಅಂಗವಾಗಿ ನಡೆಯುತ್ತಿರುವ ಚೆಸೆಬಲ್‌ ಮಾಸ್ಟರ್ಸ್‌ ಆನ್‌ಲೈನ್‌ ಚೆಸ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಸೋಮವಾರ ರಾತ್ರಿ ನಡೆದಟೂರ್ನಿಯ ಅಂತಿಮ ಸುತ್ತಿನ (10ನೇ) ಹಣಾಹಣಿಯಲ್ಲಿ ಹರಿಕೃಷ್ಣ ಅವರು ರಷ್ಯಾದ ಅಲೆಕ್ಸಾಂಡರ್‌ ಗ್ರಿಸ್‌ಚುಕ್‌ ವಿರುದ್ಧ ಪರಾಭವಗೊಂಡರು.

ಆರಂಭಿಕ ಸುತ್ತಿನಲ್ಲಿ ವ್ಲಾದಿಸ್ಲಾವ್‌ ಅರ್ಟೆಮೀವ್‌ ವಿರುದ್ಧ ಸೋತಿದ್ದ ಹರಿಕೃಷ್ಣ, ಏಳನೇ ಸುತ್ತಿನ ಪೈಪೋಟಿಯಲ್ಲಿ ವಿಶ್ವ ಚಾಂಪಿಯನ್‌ ಕಾರ್ಲ್‌ಸನ್‌ ಎದುರು ಡ್ರಾ ಸಾಧಿಸಿದ್ದರು. ಒಂಬತ್ತನೇ ಸುತ್ತಿನ ಹೋರಾಟದಲ್ಲಿ ಅವರು ಹಿಕಾರು ನಕಮುರಾ ವಿರುದ್ಧ ಪಾಯಿಂಟ್‌ ಹಂಚಿಕೊಂಡಿದ್ದರು. ಈ ಮೂಲಕ ಟೂರ್ನಿಯಲ್ಲಿ ಹತ್ತು ಸುತ್ತುಗಳಿಂದ 3.5 ಪಾಯಿಂಟ್ಸ್‌ ಕಲೆಹಾಕಲಷ್ಟೇ ಶಕ್ತರಾದರು.

‘ಮೊದಲ ದಿನವೇ ಮೂರು ಪಂದ್ಯಗಳಲ್ಲಿ ಸೋತಿದ್ದರಿಂದ ಹಿನ್ನಡೆ ಎದುರಾಯಿತು. ನಕಮುರಾ ಎದುರಿನ ಒಂಬತ್ತನೇ ಸುತ್ತಿನ ಪೈಪೋಟಿಯಲ್ಲಿ ಗೆದ್ದಿದ್ದರೆ ಮುಂದಿನ ಸುತ್ತಿಗೆ ಅರ್ಹತೆ ಗಳಿಸಬಹುದಿತ್ತು. ಆ ಅವಕಾಶವನ್ನು ಕೈಚೆಲ್ಲಿದೆ’ ಎಂದು ಹರಿಕೃಷ್ಣ ತಿಳಿಸಿದ್ದಾರೆ.

‘ವಿಶ್ವದ ಪ್ರಮುಖ ಆಟಗಾರರ ವಿರುದ್ಧ ಆನ್‌ಲೈನ್‌ನಲ್ಲಿ ಆಡಿದ್ದು ಇದೇ ಮೊದಲು. ಇದೊಂದು ವಿಶೇಷ ಅನುಭವ. ನನ್ನ ಎದುರಾಳಿಗಳು ಕಠಿಣಪರಿಸ್ಥಿತಿಯಲ್ಲಿ ತುಂಬಾ ಚೆನ್ನಾಗಿ ಆಡಿದರು’ ಎಂದು ಅವರು ಹೇಳಿದ್ದಾರೆ.

ಡಬಲ್‌ ರೌಂಡ್‌ ರಾಬಿನ್‌ ಮಾದರಿಯ ಈ ಟೂರ್ನಿಯಲ್ಲಿನಾರ್ವೆಯ ಕಾರ್ಲ್‌ಸನ್‌, ನಕಮುರಾ, ಅರ್ಟೆಮೀವ್‌ ಹಾಗೂ ಗ್ರಿಸ್‌ಚುಕ್‌ ಅವರು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT