ಶುಕ್ರವಾರ, ಆಗಸ್ಟ್ 7, 2020
28 °C

ಬೀಲ್ ಚೆಸ್ ಉತ್ಸವಕ್ಕೆ ಹರಿಕೃಷ್ಣ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಭಾರತದ ಪಿ. ಹರಿಕೃಷ್ಣ ಅವರು ಸ್ವಿಟ್ಜರ್‌ಲೆಂಡ್‌ನಲ್ಲಿ ಇದೇ 18ರಿಂದ ನಡೆಯಲಿರುವ ಬೀಲ್ ಚೆಸ್ ಉತ್ಸವದಲ್ಲಿ ಸ್ಪರ್ಧಿಸಲಿದ್ದಾರೆ.

ಕೊರೊನೋತ್ತರ ಕಾಲದಲ್ಲಿ ನಡೆಯಲಿರುವ ಮೊದಲ ಅಂತರರಾಷ್ಟ್ರೀಯ ಚೆಸ್ ಉತ್ಸವ ಇದಾಗಲಿದೆ. ಹೋದ ನಾಲ್ಕು ತಿಂಗಳಿಂದ ವಿಶ್ವದಾದ್ಯಂತ ಟೂರ್ನಿಗಳು ಸ್ಥಗಿತವಾಗಿದ್ದವು. 

ವಿಶ್ಚ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಮೈಕೆಲ್ ಆ್ಯಡಮ್ಸ್ ಮತ್ತು ರಾಡೊಲ್ಸ್ ವೋಟ್ಸೆಜೆಕ್ ಕೂಡ ಇದರಲ್ಲಿ ಭಾಗವಹಿಸಲಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 26ನೇ ಸ್ಥಾನದಲ್ಲಿರುವ ಹರಿಕೃಷ್ಣ ಅವರು ಕೂಡ ಆಹ್ವಾನ ಸ್ವೀಕರಿಸಿದ್ದಾರೆ. ಅವರು ಈ ಉತ್ಸವದ ಗ್ರ್ಯಾಂಡ್‌ಮಾಸ್ಟರ್ಸ್ ವಿಭಾಗದಲ್ಲಿ ಸ್ಪರ್ಧಿಸುವರು.

’ಆಹ್ವಾನ ಪಡೆದಿದ್ದು ಸಂತಸವಾಗಿದೆ. ಕಳೆದ ಕೆಲವು ದಿನಗಳಿಂದ ಬಹಳಷ್ಟು ಆನ್‌ಲೈನ್ ಟೂರ್ನಿಗಳನ್ನು ಆಡಿದ್ದೇನೆ. ಬಹಳ ಕಾಲದ ನಂತರ ಮತ್ತೆ ಬೋರ್ಡ್‌ ಗೇಮ್ ಆಡಲಿದ್ದೇನೆ‘ ಎಂದು ಹರಿಕೃಷ್ಣ ಹೇಳಿದ್ದಾರೆ.

2013ರಲ್ಲಿ ಬೀಲ್‌ ಉತ್ಸವದ ಮಾಸ್ಟರ್ ಓಪನ್‌ನಲ್ಲಿ ಹರಿಕೃಷ್ಣ ಅವರು ಜಯಿಸಿದ್ದರು. 2014 ಮತ್ತು 2017ರಲ್ಲಿ ಬೀಲ್   ಉತ್ಸವದಲ್ಲಿ ಹರಿಕೃಷ್ಣ ಅವರು ಸ್ಪರ್ಧಿಸಿದ್ದರು. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು