ಹಿಂದ್ ಕೇಸರಿ ಶ್ರೀಪತಿ ನಿಧನ

ಪುಣೆ (ಪಿಟಿಐ): ಬೆಳಗಾವಿ ಮೂಲದ ಪೈಲ್ವಾನ್ ಶ್ರೀಪತಿ ಕಂಚನಾಳ್ (86) ಕೋಲ್ಹಾಪುರದ ಆಸ್ಪತ್ರೆಯೊಂದರಲ್ಲಿ ಸೋಮವಾರ ನಿಧನರಾದರು.
ಪ್ರತಿಷ್ಠಿತ ಹಿಂದ್ ಕೇಸರಿ ಪ್ರಶಸ್ತಿ ವಿಜೇತರಾಗಿದ್ದರು. ಅವರು ಕುಸ್ತಿ ಕಲಿಕೆ ಮತ್ತು ವೃತ್ತಿಗಾಗಿ ಕೋಲ್ಹಾಪುರದ ನೆಲೆಸಿದ್ದರು.
’ನನ್ನ ತಂದೆಗೆ ಕೆಲವು ಕಾಲದಿಂದ ಅನಾರೋಗ್ಯವಿತ್ತು. ಕೋಲ್ಹಾಪುರದ ಡೈಮಂಡ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ‘ ಎಂದು ರೋಹಿತ್ ಕಂಚನಾಳ ತಿಳಿಸಿದ್ದಾರೆ.
1959ರಲ್ಲಿ ಶ್ರೀಪತಿ ಅವರು ರುಸ್ತುಂ ಎ ಪಂಜಾಬ್ ಬಟ್ಟಾಸಿಂಗ್ ಅವರನ್ನು ದೆಹಲಿಯ ನ್ಯೂ ರೈಲ್ವೆ ಕ್ರೀಡಾಂಗಣದಲ್ಲಿ ನಡೆದಿದ್ದ ಕುಸ್ತಿ ಸ್ಪರ್ಧೆಯಲ್ಲಿ ಸೋಲಿಸಿದ್ದರು. ದೇಶದ ಪ್ರತಿಷ್ಠಿತ ಪ್ರಶಸ್ತಿಯನ್ನು ಹಿಂದ್ ಕೇಸರಿಯನ್ನು ಗೆದ್ದಿದ್ದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.