ಶುಕ್ರವಾರ, ಏಪ್ರಿಲ್ 16, 2021
28 °C

ಹಾಕಿ ಕರ್ನಾಟಕದ ಆಯ್ಕೆ ಟ್ರಯಲ್ಸ್‌ಗೆ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾರ್ಚ್‌ನಲ್ಲಿ ಹಾಕಿ ಇಂಡಿಯಾ ಆಯೋಜಿಸಲಿರುವ ಸಬ್‌ ಜೂನಿಯರ್ ಬಾಲಕ ಮತ್ತು ಬಾಲಕಿಯರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ರಾಜ್ಯ ತಂಡಗಳ ಆಯ್ಕೆಗಾಗಿ ಹಾಕಿ ಕರ್ನಾಟಕ ಫೆಬ್ರುವರಿಯಲ್ಲಿ ಟ್ರಯಲ್ಸ್‌ ಆಯೋಜಿಸಲಿದೆ.

2005ರ ಜನವರಿ ಒಂದರಂದು ಅಥವಾ ನಂತರ ಜನಿಸಿದವರು ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಅರ್ಹರಾಗಿದ್ದಾರೆ. ಹರಿಯಾಣದ ನರ್ವಾನಾ ಜಿಂದ್‌ನಲ್ಲಿರುವ ನವದೀಪ್ ಕ್ರೀಡಾಂಗಣದಲ್ಲಿ ಮಾರ್ಚ್ 17ರಿಂದ 28ರ ವರೆಗೆ ಬಾಲಕರ ಚಾಂಪಿಯನ್‌ಷಿಪ್‌, ಜಾರ್ಖಂಡ್‌ನ ಸಿಮ್ದೇಗಾದಲ್ಲಿ ಮಾರ್ಚ್ 10ರಿಂದ 21ರ ವರೆಗೆ ಬಾಲಕರ ಚಾಂಪಿಯನ್‌ಷಿಪ್ ನಡೆಯಲಿದೆ.

ಕೊಡಗಿನ ಪೊನ್ನಂಪೇಟೆಯ ಮಿನಿ ಕ್ರೀಡಾಂಗಣದಲ್ಲಿ ಫೆಬ್ರುವರಿ ಆರರಂದು ಬಾಲಕಿಯರ ವಿಭಾಗದ ಮತ್ತು ಏಳರಂದು ಬಾಲಕರ ವಿಭಾಗದ ಆಯ್ಕೆ ನಡೆಯಲಿದೆ. ಕ್ರೀಡಾಪಟುಗಳು ಪಾಸ್‌ಪೋರ್ಟ್ ಅಳತೆಯ ಮೂರು ಫೋಟೊಗಳು, ಆಧಾರ್ ಕಾರ್ಡ್‌ ಮತ್ತು ಜನನ ಪ್ರಮಾಣಪತ್ರದ ಮೂಲ ದಾಖಲೆಯನ್ನು ತೆಗೆದುಕೊಂಡು ಬರಬೇಕು ಎಂದು ಹಾಕಿ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಎ.ಬಿ.ಸುಬ್ಬಯ್ಯ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು