ಗುರುವಾರ , ಏಪ್ರಿಲ್ 15, 2021
24 °C

ಹಾಕಿ: ನೆರವಂಡ ತಂಡಕ್ಕೆ ಭರ್ಜರಿ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ನೆರವಂಡ ತಂಡವು ಕೊಡವ ಕೌಟುಂಬಿಕ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಸೋಮ ವಾರ ಭರ್ಜರಿ ಗೆಲುವು ದಾಖಲಿಸಿತು.

ಹಾಕಿ ಕೂರ್ಗ್‌ ಆಶ್ರಯದಲ್ಲಿ ಕಾಕೋಟುಪರಂಬು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನೆರವಂಡ ತಂಡ 5–1 ಗೋಲುಗಳಿಂದ ಕೈಬುಲಿರ ತಂಡವನ್ನು ಮಣಿಸಿತು. ನೆರವಂಡ ಪರವಾಗಿ ಪ್ರವೀಣ್‌ ಪೆಮ್ಮಯ್ಯ ಐದು ಗೋಲು ದಾಖಲಿಸಿದರು. ಕೈಬುಲಿರ ಪರ ಗಣಪತಿ ಗೋಲು ತಂದಿತ್ತರು.

ಚೊಟ್ಟೇರ ತಂಡ 2-0 ಗೋಲುಗಳಿಂ ದ ಕಾಡ್ಯಮಾಡ ತಂಡವನ್ನು ಮಣಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿತು. ವಿಜೇತ ತಂಡದ ಪರ ಬಿಪಿನ್ ಎರಡೂ ಗೋಲು ದಾಖಲಿಸಿದರು.

ಕಳ್ಳಿಚಂಡ ತಂಡ 4-1 ಗೋಲು ಗಳಿಂದ ಮಳವಂಡ ತಂಡವನ್ನು ಪರಾಭವಗೊಳಿಸಿತು. ಕಳ್ಳಿಚಂಡದ ಪರ ವಾಗಿ ಬೋಪಣ್ಣ ಹಾಗೂ ಸಾವನ್ ತಲಾ ಎರಡು ಗೋಲು ತಂದಿತ್ತರು. ಐಚಂಡ ತಂಡವು ಏಕೈಕ ಗೋಲಿನಿಂದ ಕರೋಟಿರ ತಂಡ ಮಣಿಸಿ ಮುನ್ನಡೆಯಿತು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು