ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ನೀತು, ಸ್ವೀಟಿ ಚಿನ್ನದ ಪಂಚ್

ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ ಗೆದ್ದು ಐತಿಹಾಸಿಕ ಸಾಧನೆ
Last Updated 25 ಮಾರ್ಚ್ 2023, 19:06 IST
ಅಕ್ಷರ ಗಾತ್ರ

ನವದೆಹಲಿ: ಕೆ.ಡಿ.ಜಾಧವ್‌ ಒಳಾಂಗಣ ಕ್ರೀಡಾಂಗಣದ ಬಾಕ್ಸಿಂಗ್‌ ರಿಂಗ್‌ನಲ್ಲಿ ಪ್ರಬಲ ಪಂಚ್‌ಗಳ ಮೂಲಕ ಎದುರಾಳಿಗಳನ್ನು ನಿಬ್ಬೆರಗಾಗಿಸಿದ ಭಾರತದ ಸ್ವೀಟಿ ಬೂರಾ ಮತ್ತು ನೀತು ಗಂಗಾಸ್‌ ಅವರು ಚಿನ್ನ ಗೆದ್ದು ಸಂಭ್ರಮಿಸಿದರು.

ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ನಡೆದ ಫೈನಲ್‌ನಲ್ಲಿ ಸ್ಪರ್ಧಿಸಿದ ಭಾರತದ ಇಬ್ಬರೂ ಗೆಲುವಿನ ನಗು ಬೀರಿದರು.

ಲೈಟ್‌ ಹೆವಿವೇಟ್‌ (81 ಕೆ.ಜಿ.) ವಿಭಾಗದಲ್ಲಿ ಸ್ಪರ್ಧಿಸಿದ ಸ್ವೀಟಿ ಅವರು ಚೀನಾದ ವಾಂಗ್‌ ಲಿ ನಾ ವಿರುದ್ಧ ಗೆದ್ದರು. ನೀತು ಅವರು 48 ಕೆ.ಜಿ. ವಿಭಾಗದ ಫೈನಲ್‌ನಲ್ಲಿ 5–0 ರಲ್ಲಿ ಮಂಗೋಲಿಯದ ಲುತ್ಸಾಯಿಖಾನ್ ಅಲ್ತಾನ್‌ಸೆತ್ಸೆಗ್‌ ಅವರನ್ನು ಮಣಿಸಿದರು.

ಸ್ವೀಟಿ ಅವರು ಚೀನಾದ ಸ್ಪರ್ಧಿ ಯಿಂದ ಪ್ರಬಲ ಪೈಪೋಟಿ ಎದುರಿ ಸಿದರು. ಆದರೂ ಮೂರು ಸುತ್ತುಗಳಲ್ಲಿ ಮೇಲುಗೈ ಸಾಧಿಸಿ ಚಾಂಪಿಯನ್‌ ಆದರು.

22 ವರ್ಷದ ನೀತು ಆರಂಭ ದಿಂದಲೇ ಆಕ್ರಮಣಕಾರಿ ಪ್ರದರ್ಶನ ನೀಡಿ ಎದುರಾಳಿಯ ಮೇಲೆ ಒತ್ತಡ ಹೇರಿದರು. ಮೊದಲ ಸುತ್ತಿನಲ್ಲಿ ಅವರು 5–0ರಲ್ಲಿ ಮುನ್ನಡೆ ಸಾಧಿಸಿದರು. ಎರಡನೇ ಸುತ್ತಿನಲ್ಲಿ ಲುತ್ಸಾಯಿಖಾನ್ ಮರುಹೋರಾಟ ನಡೆಸಲು ಪ್ರಯ
ತ್ನಿಸಿದರು. ಆದರೂ ಏಕಾಗ್ರತೆ ಕಳೆದುಕೊಳ್ಳದ ಭಾರತದ ಬಾಕ್ಸರ್‌ 3–2ರಲ್ಲಿ ಎರಡನೇ ಸುತ್ತು ತಮ್ಮದಾಗಿಸಿಕೊಂಡರು.

ಕೊನೆಯ ಮೂರು ನಿಮಿಷಗಳಲ್ಲೂ ನೀತು ಅವರು ಪಾರಮ್ಯ ಮೆರೆದರು. ಎದುರಾಳಿಯ ಪಂಚ್‌ಗಳಿಂದ ತಪ್ಪಿಸಿಕೊಂಡರಲ್ಲದೆ, ಅವಕಾಶ ಸಿಕ್ಕಾಗ ಪ್ರಬಲ ಪಂಚ್‌ಗಳನ್ನು ನೀಡಿ ಪಾಯಿಂಟ್‌ ಗಿಟ್ಟಿಸಿಕೊಂಡರು.

ನೀತು ಮತ್ತು ಸ್ವೀಟಿ ಅವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಆರನೇ ಹಾಗೂ ಏಳನೇ ಬಾಕ್ಸರ್‌ ಎನಿಸಿಕೊಂಡರು. ಈ ಹಿಂದೆ ಭಾರತದ ಐವರು ಮಹಿಳಾ ಬಾಕ್ಸರ್‌ಗಳು ವಿಶ್ವ ಚಾಂಪಿಯನ್‌ ಆಗಿದ್ದರು.

ಮೇರಿ ಕೋಮ್‌ (2002, 2005, 2006, 2008, 2010 ಮತ್ತು 2018) ಆರು ಸಲ ವಿಶ್ವಚಾಂಪಿಯನ್‌ ಆಗಿದ್ದರೆ, ಸರಿತಾ ದೇವಿ (2006), ಆರ್‌.ಎಲ್‌.ಜೆನ್ನಿ (2006), ಕೆ.ಸಿ.ಲೇಖಾ (2006) ಮತ್ತು ನಿಖತ್‌ ಜರೀನ್‌ (2022) ಅವರು ತಲಾ ಒಮ್ಮೆ ಚಿನ್ನಜಯಿಸಿದ್ದಾರೆ.

ಲವ್ಲಿನಾ, ನಿಖತ್‌ ಇಂದು ಕಣಕ್ಕೆ

ಭಾರತದ ಲವ್ಲಿನಾ ಬೊರ್ಗೊಹೈನ್‌ ಮತ್ತು ನಿಖತ್‌ ಜರೀನ್‌ ಅವರು ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. 75 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿರುವ ಲವ್ಲಿನಾ ಅವರು ಆಸ್ಟ್ರೇಲಿಯಾದ ಕೈಟ್ಲಿನ್‌ ಪಾರ್ಕರ್‌ ವಿರುದ್ಧ ಪೈಪೋಟಿ ನಡೆಸುವರು. ನಿಖತ್‌ ಅವರು 52 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ವಿಯೆಟ್ನಾಂನ ಗುಯೆನ್ ಥಿ ಟಾಮ್ ಅವರನ್ನು ಎದುರಿಸುವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT