ಬುಧವಾರ, ಅಕ್ಟೋಬರ್ 5, 2022
26 °C
ಎರಡನೇ ಸ್ಥಾನದಲ್ಲಿ ಸೂರ್ಯಕುಮಾರ್

ಐಸಿಸಿ ಟಿ20 ರ‍್ಯಾಂಕಿಂಗ್ಸ್: ಶ್ರೇಯಸ್‌, ರವಿಗೆ ಬಡ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಭಾರತದ ಸೂರ್ಯಕುಮಾರ್ ಯಾದವ್‌ ಅವರು ಐಸಿಸಿ ಟಿ20 ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಕಾಪಾಡಿಕೊಂಡಿದ್ದಾರೆ. ಶ್ರೇಯಸ್ ಅಯ್ಯರ್ ಆರು ಸ್ಥಾನ ಏರಿಕೆ ದಾಖಲಿಸಿ 19ನೇ ಸ್ಥಾನ ಪಡೆದಿದ್ದಾರೆ.

ಸೂರ್ಯಕುಮಾರ್ ಅವರ ಬಳಿ 805 ಪಾಯಿಂಟ್‌ಗಳಿವೆ. ಪಾಕಿಸ್ತಾನದ ಬಾಬರ್‌ ಆಜಂ ಅಗ್ರಸ್ಥಾನದಲ್ಲಿದ್ದಾರೆ.

ವೆಸ್ಟ್ ಇಂಡೀಸ್‌ ವಿರುದ್ಧ ಇತ್ತೀಚೆಗೆ ನಡೆದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಶ್ರೇಯಸ್‌ 40 ಎಸೆತಗಳಲ್ಲಿ 64 ರನ್‌ ಸಿಡಿಸಿದ್ದರು. ಅವರ ಬಳಿ ಸದ್ಯ 578 ಪಾಯಿಂಟ್‌ಗಳಿವೆ.

ಬೌಲರ್‌ಗಳ ವಿಭಾಗದಲ್ಲಿ ಭಾರತದ ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್‌ ಮತ್ತು ರವಿ ಬಿಷ್ಣೋಯಿ ಭಾರಿ ಬಡ್ತಿ ಗಳಿಸಿದ್ದಾರೆ. ವಿಂಡೀಸ್‌ ಎದುರಿನ ಸರಣಿಯ ಎರಡು ಪಂದ್ಯಗಳಲ್ಲಿ ಆರು ವಿಕೆಟ್‌ ಗಳಿಸಿದ್ದ ರವಿ, 50 ಸ್ಥಾನಗಳ ಏರಿಕೆ ಕಂಡು 44ನೇ ಸ್ಥಾನದಲ್ಲಿದ್ದಾರೆ.

ಕೊನೆಯ ಪಂದ್ಯದಲ್ಲಿ ಕುಲದೀಪ್‌ ಮೂರು ವಿಕೆಟ್‌ ಗಳಿಸಿದ್ದರು. ಅವರು 58 ಸ್ಥಾನ ಜಿಗಿತ ದಾಖಲಿಸಿದ್ದು, 87ನೇ ಸ್ಥಾನಕ್ಕೆ ತಲುಪಿದ್ದಾರೆ. ಉತ್ತಮ ಸಾಮರ್ಥ್ಯ ತೋರಿದ್ದರೂ ವೇಗಿ ಭುವನೇಶ್ವರ್ ಕುಮಾರ್ ಒಂದು ಸ್ಥಾನ ಇಳಿಕೆ ಕಂಡಿದ್ದು, ಒಂಬತ್ತನೇ ಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್‌ ಮತ್ತು ಅಫ್ಗಾನಿಸ್ತಾನದ ಮೊಹಮ್ಮದ್ ನಬಿ ಕ್ರಮವಾಗಿ ಬೌಲರ್‌ ಹಾಗೂ ಆಲ್‌ರೌಂಡರ್‌ಗಳ ವಿಭಾಗದಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು