ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್‌: ‘ಎಚ್‌’ ಗುಂಪಿನಲ್ಲಿ ಭಾರತ

Last Updated 15 ಆಗಸ್ಟ್ 2021, 11:24 IST
ಅಕ್ಷರ ಗಾತ್ರ

ಬೆಂಗಳೂರು: ಸೌದಿ ಅರೆಬಿಯಾದ ಜೆಡ್ಡಾದಲ್ಲಿ ಇದೇ 20ರಿಂದ ನಡೆಯಲಿರುವ ಫಿಬಾ ಏಷ್ಯಾಕಪ್ ಬ್ಯಾಸ್ಕೆಟ್‌ಬಾಲ್ ಅರ್ಹತಾ ಟೂರ್ನಿಯಲ್ಲಿ ಭಾರತ ‘ಎಚ್‌’ ಗುಂಪಿನಲ್ಲಿ ಸ್ಥಾನ ಗಳಿಸಿದೆ. ಪ್ಯಾಲೆಸ್ಟೀನ್ ಮತ್ತು ಆತಿಥೇಯ ಸೌದಿ ಅರೆಬಿಯಾ ತಂಡಗಳು ಇದೇ ಗುಂಪಿನಲ್ಲಿವೆ.

ಮೂರು ದಿನ ನಡೆಯಲಿರುವ ಟೂರ್ನಿಯ ಮೊದಲ ದಿನ ಭಾರತ ಸೌದಿ ಅರೆಬಿಯಾವನ್ನು ಎದುರಿಸಲಿದೆ. ಮರುದಿನ ಭಾರತಕ್ಕೆ ಪ್ಯಾಲೆಸ್ಟೀನ್ ಎದುರಾಳಿ. ಎರಡೂ ಪಂದ್ಯಗಳು ಕಿಂಗ್ ಅಬ್ದುಲ್ಲ ಸ್ಪೋರ್ಟ್ಸ್‌ ಸಿಟಿ ಹಾಲ್‌ನಲ್ಲಿ ರಾತ್ರಿ 10.45ಕ್ಕೆ ನಡೆಯಲಿವೆ.

ಭಾರತ ತಂಡ: ಮುಯಿನ್ ಬೆಕ್ ಹಫೀಜ್‌, ಅರವಿಂದ್ ಅಣ್ಣಾದುರೈ, ಮುತ್ತು ಕೃಷ್ಣನ್‌ (ಮೂವರೂ ತಮಿಳುನಾಡು), ಜಗದೀಪ್‌ ಸಿಂಗ್, ಅಮ್ಜೋತ್ ಸಿಂಗ್‌, ಅಮೃತ್‌ಪಾಲ್ ಸಿಂಗ್ (ಪಂಜಾಬ್‌), ವಿಶೇಷ್ ಭೃಗುವಂಶಿ (ನಾಯಕ–ಒಎನ್‌ಜಿಸಿ), ಪ್ರಶಾಂತ್ ಸಿಂಗ್ ರಾವತ್ (ಉತ್ತರಾಖಂಡ), ಜೋಗಿಂದರ್‌ ಸಿಂಗ್ (ಸರ್ವಿಸಸ್‌), ಸಹೈಜ್‌ ಪ್ರತಾಪ್ ಸಿಂಗ್ (ಚಂಡೀಗಢ), ಪ್ರತ್ಯಾಂಶು ತೊಮರ್ (ಕರ್ನಾಟಕ), ಪ್ರಣವ್ ಪ್ರಿನ್ಸ್‌ (ಕೇರಳ). ಮುಖ್ಯ ಕೋಚ್‌: ವೆಸೆಲಿನ್ ಮೆಟಿಚ್‌, ಮ್ಯಾನೇಜರ್: ಶಕ್ತಿಕುಮಾರ್ ಮಹಿಪತ್ ಸಿಂಗ್ ಗೋಹಿಲ್‌, ಕೋಚ್‌: ತಂಗಚ್ಚನ್ ಮುಳಯ್ಕಲ್‌, ಮೋಹಿತ್ ಭಂಡಾರಿ, ಪ್ರದೀಪ್ ತೋಮರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT