ಶುಕ್ರವಾರ, ಏಪ್ರಿಲ್ 23, 2021
27 °C
ಕಾಮನ್‌ವೆಲ್ತ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌: ಇಂಗ್ಲೆಂಡ್‌, ಸಿಂಗಪುರಕ್ಕೆ ಸೋಲು

ಪುರುಷರ ಪಾರಮ್ಯ; ಮಹಿಳೆಯರಿಗೆ ಚೊಚ್ಚಲ ಪ್ರಶಸ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕಟಕ್‌ : ರೋಚಕ ಹಣಾಹಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ಆತಿಥೇಯ ಭಾರತ ತಂಡ ಕಾಮನ್‌ವೆಲ್ತ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿತು. ಸಿಂಗಪುರ ವಿರುದ್ಧ ಗೆದ್ದ ಮಹಿಳಾ ವಿಭಾಗದವರು ಚೊಚ್ಚಲ ಪ್ರಶಸ್ತಿಗೆ ಮುತ್ತನ್ನಿಕ್ಕಿದರು.

ಶುಕ್ರವಾರ ಇಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಪುರುಷರ ತಂಡ 3–2ರಲ್ಲಿ ಮತ್ತು ಮಹಿಳೆಯರ ತಂಡ 3–0ಯಿಂದ ಜಯ ಸಾಧಿಸಿತು. ಈ ಮೂಲಕ 1997ರಿಂದ ಆಧಿಪತ್ಯ ಸ್ಥಾಪಿಸಿದ್ದ ಸಿಂಗಪುರಕ್ಕೆ ನಿರಾಸೆ ಮೂಡಿಸಿತು.

ಸೂರತ್‌ನಲ್ಲಿ ಕಳೆದ ಬಾರಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಪುರುಷರ ತಂಡಕ್ಕೆ ನಿರ್ಣಾಯಕ ಹಂತದಲ್ಲಿ ಜಯ ತಂದುಕೊಟ್ಟ ‘ಬರ್ತಡೇ ಬಾಯ್‌’ ಹರ್ಮೀತ್ ದೇಸಾಯಿ ಮಿಂಚಿದರು. ಮಹಿಳೆಯರ ತಂಡಕ್ಕೆ ಕರ್ನಾಟಕದ ಅರ್ಚನಾ ಕಾಮತ್ ಆರಂಭದಲ್ಲಿ ಮುನ್ನಡೆ ಗಳಿಸಿಕೊಟ್ಟಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.