ಸೋಮವಾರ, ಜುಲೈ 4, 2022
25 °C

ಚೆಸ್: ಎಂಟರ ಘಟ್ಟಕ್ಕೆ ಪ್ರಜ್ಞಾನಂದ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಯುವ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಮೆಲ್ಟ್‌ವಾಟರ್ ಚಾಂಪಿಯನ್ಸ್‌ ಚೆಸ್ ಚೆಸೆಬಲ್ ಮಾಸ್ಟರ್ಸ್‌ ಟೂರ್ನಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ. 

ಭಾನುವಾರ ತಡರಾತ್ರಿ ನಡೆದ 15ನೇ ಸುತ್ತಿನಲ್ಲಿ 16 ವರ್ಷದ ಪ್ರಜ್ಞಾನಂದ ಭಾರತದವರೇ ಆದ ಗ್ರ್ಯಾಂಡ್‌ಮಾಸ್ಟರ್‌ ವಿದಿತ್ ಗುಜರಾತಿ ಎದುರು ಜಯಿಸಿದರು. 

ಈ ಟೂರ್ನಿಯ ಆರನೇ ಸುತ್ತಿನಲ್ಲಿ ಪ್ರಜ್ಞಾನಂದ ವಿಶ್ವ ಚಾಂಪಿಯನ್, ನಾರ್ವೆಯ ಮ್ಯಾಗ್ನಸ್ ಕಾರ್ಲಸನ್  ವಿರುದ್ಧ ಜಯಿಸಿದ್ದರು. ಒಟ್ಟು 25 ಅಂಕ ಗಳಿಸಿ ನಾಲ್ಕನೇ ಸ್ಥಾನ ಪಡೆದರು. ಅನೀಶ್ ಗಿರಿ (29 ಅಂಕ), ಕಾರ್ಲಸನ್ (28 ಅಂಕ) ಮತ್ತು ಡಿಂಗ್ ಲಿರೆನ್ (25 ಅಂಕ) ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು