ಬುಧವಾರ, ಮಾರ್ಚ್ 22, 2023
25 °C

ಜರ್ಮನಿಯಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್‌ ನಾರಾಯಣನ್‌ಗೆ ಅವಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಬಂಡೆಸ್‌ಲಿಗಾ ಚೆಸ್‌ ಲೀಗ್‌ನಲ್ಲಿ ಆಡಲು ಜರ್ಮನಿಗೆ ತೆರಳಿದ್ದ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಎಸ್‌.ಎಲ್‌. ನಾರಾಯಣನ್‌ ‘ಅವಮಾನ‘ ಅನುಭವಿಸಿದ್ದಾರೆ. ಸೋಮವಾರ ನಡೆಯಬೇಕಿದ್ದ ಪಂದ್ಯಕ್ಕೂ ಮೊದಲು ಅವರನ್ನು ಲೋಹ ಶೋಧಕ ತಪಾಸಣೆಯ ಸಂದರ್ಭದಲ್ಲಿ ಬರಿಗಾಲಿನಲ್ಲಿ ನಿಲ್ಲಿಸಲಾಗಿತ್ತು.

ಈ ಕುರಿತು ನಾರಾಯಣನ್‌ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಲೋಹ ಶೋಧಕ ತಪಾಸಣೆಯ ಸಂದರ್ಭದಲ್ಲಿ ‘ಬೀಪ್‘ ಶಬ್ದ ಉಂಟಾಯಿತು. ಹೀಗಾಗಿ ಅವರ ಬೂಟು ಮತ್ತು ಸಾಕ್ಸ್‌ ಬಿಚ್ಚಿಸಿ ನಿಲ್ಲಿಸಲಾಯಿತು. ಆದರೆ ಆ ಶಬ್ದ ಬಂದಿದ್ದು ನೆಲದ ಮೇಲೆ ಹಾಸಿದ್ದ ಕಾರ್ಪೆಟ್‌ನಿಂದ ಎಂದು ಬಳಿಕ ಗೊತ್ತಾಗಿದೆ. ಈ ರೀತಿಯ ತಪಾಸಣೆಗಳು ಈ ಮೊದಲು ನಡೆದಿವೆ. ಆದರೆ ವಿಶ್ವ ಚಾಂಪಿಯನ್‌, ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರು ಅಮೆರಿಕದ ಹ್ಯಾನ್ಸ್ ನೀಮನ್ ಅವರು ಮೋಸದಾಟದ ಆರೋಪ ಮಾಡಿದ ಬಳಿಕ ಆಟಗಾರರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ.

‘ನನಗೆ ಅವಮಾನವಾಗಿದೆ. ಈ ಕುರಿತು ಮೌನವಾಗಿದ್ದರೆ ನನಗೆ ಮತ್ತು ಈ ರೀತಿಯ ಅವಮಾನ ಎದುರಿಸುವ ಕ್ರೀಡಾಪಟುಗಳಿಗೆ ನ್ಯಾಯ ಸಲ್ಲಿಸಿದಂತಾಗುತ್ತಿರಲಿಲ್ಲ‘ ಎಂದು ನಾರಾಯಣನ್ ಟ್ವೀಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು