ಚೆನ್ನೈ: ಭಾರತದ ಗ್ರ್ಯಾಂಡ್‌ಮಾಸ್ಟರ್ ವಿದಿತ್ ಗುಜರಾತಿ ಅವರು ವಿಶ್ವದ ಅಗ್ರ ರ‍್ಯಾಂಕಿನ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅವರಿಗೆ ಆಘಾತ ನೀಡಿದರು.
ಪ್ರೊ ಚೆಸ್ ಲೀಗ್ ಆನ್‌ಲೈನ್ ಟೂರ್ನಿಯಲ್ಲಿ ಇಂಡಿಯನ್ ಯೋಗೀಸ್ ತಂಡವನ್ನು ಪ್ರತಿನಿಧಿಸಿರುವ ವಿದಿತ್, ಕಪ್ಪುಕಾಯಿಗಳೊಂದಿಗೆ ಆಡಿ ಗೆಲುವು ಒಲಿಸಿಕೊಂಡರು. ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಕಾರ್ಲ್‌ಸನ್ ಅವರು ಭಾರತದ ಆಟಗಾರನನ್ನು ಚೆಕ್‌ಮೇಟ್ ಮಾಡುವ ಮೂರು ಅವಕಾಶಗಳನ್ನು ಕಳೆದುಕೊಂಡರು. ಇದರ ಸಂಪೂರ್ಣ ಲಾಭವನ್ನು ವಿದಿತ್ ಪಡೆದರು.
ವಿಶ್ವದಾದ್ಯಂತ 16 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದು, ಕಾರ್ಲ್‌ಸನ್ ಅವರು ಕೆನಡಾ ಚೆಸ್‌ಬ್ರಾಸ್ ತಂಡದ ಪರ ಆಡುತ್ತಿದ್ದಾರೆ.
‘ಈಗಷ್ಟೇ ಸಾರ್ವಕಾಲಿಕ ಶ್ರೇಷ್ಠ ಆಟಗಾರನನ್ನು ಮಣಿಸಿದೆ‘ ಎಂದು ಹಾಲಿ ವಿಶ್ವ ಚಾಂಪಿಯನ್‌ಅನ್ನು ಸೋಲಿಸಿದ ಬಳಿಕ ವಿದಿತ್ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಭಾರತದ ಗ್ರ್ಯಾಂಡ್‌ಮಾಸ್ಟರ್‌ಗಳಾದ ಆರ್. ಪ್ರಗ್ನಾನಂದ, ಡಿ. ಗುಕೇಶ್ ಮತ್ತು ಅರ್ಜುನ್ ಎರಿಗೈಸಿ ಅವರು ಕಾರ್ಲ್‌ಸನ್ ಅವರನ್ನು ಸೋಲಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.