ಬುಧವಾರ, ಜನವರಿ 20, 2021
20 °C
ಬೆಂಗಳೂರಿನಲ್ಲಿ ಜನವರಿ 5ರಿಂದ ರಾಷ್ಟ್ರೀಯ ಶಿಬಿರ

ಹಾಕಿ ತಂಡದಲ್ಲಿ ಕನ್ನಡಿಗ ಸುನಿಲ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತ ಪುರುಷರ ಹಾಕಿ ತಂಡದ ರಾಷ್ಟ್ರೀಯ ಶಿಬಿರವು ಬೆಂಗಳೂರಿನಲ್ಲಿ ಜನವರಿ 5ರಿಂದ ನಡೆಯಲಿದೆ. ತಂಡದ ನಾಯಕ ಮನ್‌ಪ್ರೀತ್ ಸಿಂಗ್‌, ಗೋಲ್‌ಕೀಪರ್ ಪಿ.ಆರ್‌.ಶ್ರೀಜೇಶ್, ಕನ್ನಡಿಗ ಎಸ್‌.ವಿ.ಸುನಿಲ್‌ ಸೇರಿದಂತೆ 33 ಮಂದಿ ಆಟಗಾರರು ಪಾಲ್ಗೊಳ್ಳಲಿದ್ದಾರೆ.

ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ಆವರಣದಲ್ಲಿ ಶಿಬಿರ ನಡೆಯಲಿದ್ದು, ತರಬೇತಿಗೂ ಮೊದಲು ಆಟಗಾರರು ಸಾಯ್ ಹಾಗೂ ಹಾಕಿ ಇಂಡಿಯಾದ ಮಾರ್ಗಸೂಚಿಗಳ ಅನ್ವಯ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ.

‘ಮೂರು ವಾರಗಳ ವಿರಾಮದ ಬಳಿ ಆಟಗಾರರು ಮಾನಸಿಕ ಹಾಗೂ ದೈಹಿಕವಾಗಿ ಹೊಸ ಉತ್ಸಾಹದೊಂದಿಗೆ ಶಿಬಿರದಲ್ಲಿ ಪಾಲ್ಗೊಳ್ಳುವುದನ್ನು ನಿರೀಕ್ಷಿಸುತ್ತೇನೆ‘ ಎಂದು ಭಾರತ ತಂಡದ ಮುಖ್ಯ ಕೋಚ್‌ ಗ್ರಹಾಂ ರೀಡ್ ಹೇಳಿದ್ದಾರೆ.

‘ಮಂಬರುವ ಟೂರ್ನಿಗಳಿಗೆ ಸೂಕ್ತ ರೀತಿಯಲ್ಲಿ ಸಜ್ಜುಗೊಳ್ಳಲು ಈ ಶಿಬಿರವನ್ನು ಬಳಸಿಕೊಳ್ಳಲಾಗುವುದು‘ ಎಂದು ರೀಡ್‌ ನುಡಿದರು.

ಶಿಬಿರದಲ್ಲಿ ಪಾಲ್ಗೊಳ್ಳಲಿರುವ ಸಂಭಾವ್ಯ ಆಟಗಾರರು: ಗೋಲ್‌ಕೀಪರ್ಸ್‌: ಪಿ.ಆರ್‌.ಶ್ರೀಜೇಶ್‌, ಕೃಷ್ಣ ಬಹಾದ್ದೂರ್ ಪಾಠಕ್‌, ಸೂರಜ್ ಕರ್ಕೇರಾ.

ಡಿಫೆಂಡರ್ಸ್‌: ಬೀರೇಂದ್ರ ಲಾಕ್ರಾ, ರೂಪಿಂದರ್ ಪಾಲ್ ಸಿಂಗ್‌, ಸುರೇಂದರ್ ಕುಮಾರ್‌, ಅಮಿತ್ ರೋಹಿದಾಸ್‌, ಕೊತಾಜೀತ್ ಸಿಂಗ್‌ ಖದಂಗ್‌ಬಮ್‌, ಹರ್ಮನ್‌ಪ್ರೀತ್ ಸಿಂಗ್‌, ಗುರಿಂದರ್ ಸಿಂಗ್‌, ಜರ್ಮನ್‌ಪ್ರೀತ್ ಸಿಂಗ್‌, ವರುಣ್‌ ಕುಮಾರ್‌, ದಿಪ್ಸನ್ ಟಿರ್ಕಿ, ನೀಲಂ ಸಂಜೀಪ ಕ್ಸೆಸ್‌.

ಮಿಡ್‌ಫೀಲ್ಡರ್ಸ್‌: ಮನ್‌ಪ್ರೀತ್ ಸಿಂಗ್‌, ಚಿಂಗ್ಲೆನ್ಸನಾ ಸಿಂಗ್‌ ಕಂಗುಜಮ್‌, ನೀಲಕಂಠ ಶರ್ಮಾ, ಸುಮಿತ್‌, ಜಸ್ಕರಣ್‌ ಸಿಂಗ್‌, ರಾಜ್‌ ಕುಮಾರ್ ಪಾಲ್‌, ಹಾರ್ದಿಕ್ ಸಿಂಗ್‌, ವಿವೇಕ್ ಸಾಗರ್ ಪ್ರಸಾದ್‌.

ಫಾರ್ವರ್ಡ್ಸ್: ಎಸ್‌.ವಿ.ಸುನೀಲ್‌, ಅಕ್ಷದೀಪ್‌ ಸಿಂಗ್‌, ಮನದೀಪ್ ಸಿಂಗ್‌, ಲಲಿತ್ ಉಪಾಧ್ಯಾಯ, ರಮಣದೀಪ್ ಸಿಂಗ್‌, ಸಿಮ್ರನ್‌ಜೀತ್ ಸಿಂಗ್‌, ಶಮ್ಷೇರ್‌ ಸಿಂಗ್‌, ಗುರ್ಜತ್ ಸಿಂಗ್‌, ದಿಲ್‌ಪ್ರೀತ್ ಸಿಂಗ್‌, ಗುರುಸಾಹಿಬ್‌ಜೀತ್‌ ಸಿಂಗ್‌, ಶೀಲಾನಂದ ಲಾಕ್ರಾ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು