ಶುಕ್ರವಾರ, ಮೇ 27, 2022
22 °C
ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಟೂರ್ನಿ: ಕರ್ನಾಟಕದ ಪುರುಷ, ಮಹಿಳೆಯರಿಗೆ ನಿರಾಶೆ

ರೈಲ್ವೆ, ಪಂಜಾಬ್ ತಂಡಗಳು ಫೈನಲ್‌ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಂಜಾಬ್ ಮತ್ತು ಭಾರತೀಯ ರೈಲ್ವೆ ತಂಡಗಳು ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಫೈನಲ್ ಪ್ರವೇಶಿಸಿದವು.

ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಸೆಮಿಫೈನಲ್‌ನಲ್ಲಿ ಪಂಜಾಬ್ 88–75ರಲ್ಲಿ ಕರ್ನಾಟಕ ತಂಡವನ್ನು ಮಣಿಸಿತು. ಮಹಿಳೆಯರ ವಿಭಾಗದಲ್ಲಿ ರೈಲ್ವೆ 115–88ರಲ್ಲಿ ತಮಿಳುನಾಡು ವಿರುದ್ಧ ಜಯ ಗಳಿಸಿತು. 

ಕರ್ನಾಟಕ ಎದುರಿನ ಪಂದ್ಯದಲ್ಲಿ ಪಂಜಾಬ್‌ನ ಕರ್ವರ್‌ ಸಿಂಗ್ ಮತ್ತು ಅಮೃತ್‌ಪಾಲ್ ಸಿಂಗ್ ತಲಾ 22 ಪಾಯಿಂಟ್ ಗಳಿಸಿದರು. ಅಮ್ಜ್ಯೋತ್ ಸಿಂಗ್ 16 ಮತ್ತು ಪ್ರಿನ್ಸೆಪಲ್ ಸಿಂಗ್ 10 ಪಾಯಿಂಟ್ ಕಲೆ ಹಾಕಿದರು. ಕರ್ನಾಟಕದ ಪರ ಅಭಿಷೇಕ್ ಗೌಡ 22, ಹರೀಶ್‌ 18 ಮತ್ತು ಅನಿಲ್ ಕುಮಾರ್ 11 ಪಾಯಿಂಟ್ ಗಳಿಸಿದರು.  

ಮಹಿಳೆಯರ ಸೆಮಿಫೈನಲ್‌ನಲ್ಲಿ ರೈಲ್ವೆಗಾಗಿ ಪುಷ್ಪಾ 22, ಅವಂತಿ ವರ್ಧನ್ 16, ಪೂನಂ ಚತುರ್ವೇದಿ, ಗುಲ್‌ಭಾಷ ಅಲಿ ಮತ್ತು ಮಧು ಕುಮಾರ್ 12, ಬಾಂಧವ್ಯ 10 ಪಾಯಿಂಟ್ ಗಳಿಸಿದರೆ ತಮಿಳುನಾಡು ತಂಡಕ್ಕಾಗಿ ಸತ್ಯಾ 30, ಅನಿತಾ 14, ಪ್ರಿಯಾ 10 ಪಾಯಿಂಟ್ ಗಳಿಸಿದರು. ‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು