ಶನಿವಾರ, ಜುಲೈ 24, 2021
28 °C

ಒಲಿಂಪಿಕ್ಸ್: ಟೋಕಿಯೊ ತಲುಪಿದ ಭಾರತ ಸೇಲಿಂಗ್ ತಂಡ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಭಾರತದ ಸೇಲಿಂಗ್ ಪಟುಗಳ ತಂಡವು ಮಂಗಳವಾರ ಟೋಕಿಯೊಗೆ ಕಾಲಿಟ್ಟಿತು. ಇದರೊಂದಿಗೆ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ತೆರಳಿದ ದೇಶದ ಮೊದಲ ತಂಡ ಎನಿಸಿಕೊಂಡಿತು.

ಕರ್ನಾಟಕದ ಗಣಪತಿ ಚೆಂಗಪ್ಪ, ವರುಣ್ ಥಕ್ಕರ್‌, ವಿಷ್ಣು ಸರವಣನ್‌ ಮತ್ತು ನೇತ್ರಾ ಕುಮನನ್‌ ಮತ್ತು ಕೋಚ್‌ಗಳನ್ನೊಳಗೊಂಡ ತಂಡವು ಹನೆಡಾ ವಿಮಾನ ನಿಲ್ದಾಣ ತಲುಪಿದೆ.

ಇದೇ 23ರಂದು ಒಲಿಂಪಿಕ್ಸ್ ಆರಂಭವಾಗಲಿದ್ದು, 25ರಿಂದ ಸೇಲಿಂಗ್ ಸ್ಪರ್ಧೆಗಳು ನಡೆಯಲಿವೆ.

ಟೋಕಿಯೊಗೆ ತೆರಳುವ ಮೊದಲು ಸೇಲಿಂಗ್ ಪಟುಗಳು, ಸರ್ಕಾರದ ಟಾರ್ಗೆಟ್ ಒಲಿಂಪಿಕ್‌ ಪೋಡಿಯಂ ಯೋಜನೆಯಡಿ (ಟಾಪ್ಸ್) ಯೂರೋಪ್‌ನ ವಿವಿಧ ದೇಶಗಳಲ್ಲಿ ತರಬೇತಿ ಪಡೆದಿದ್ದಾರೆ. ನೇತ್ರಾ ಅವರು ಸ್ಪೇನ್‌ನಲ್ಲಿ, ಥಕ್ಕರ್‌ ಹಾಗೂ ಗಣಪತಿ ಜೋಡಿಯು ಪೋರ್ಚುಗಲ್‌ನಲ್ಲಿ ತರಬೇತಿ ಪಡೆದರೆ, ಸರವಣನ್ ಮಾಲ್ಟಾದಲ್ಲಿ ಸಿದ್ಧತೆ ನಡೆಸಿದ್ದರು.

ಇವರೆಲ್ಲರೂ ಯೂರೋಪ್‌ನ ರಾಷ್ಟ್ರಗಳಿಂದ ನೇರವಾಗಿ ಟೋಕಿಯೊಗೆ ತೆರಳಿರುವುದರಿಂದ, ಭಾರತದಿಂದ ಬರುವವರು ಎದುರಿಸುವ ಕಠಿಣ ಕೋವಿಡ್‌ ನಿಯಮಗಳು ಇವರಿಗೆ ಅನ್ವಯಿಸುವುದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು