ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿಪಟು ನವೀನ್‌ಗೆ ಕೋವಿಡ್‌

Last Updated 7 ಮೇ 2021, 11:31 IST
ಅಕ್ಷರ ಗಾತ್ರ

ಸೋಫಿಯಾ, ಬಲ್ಗೇರಿಯಾ: ಭಾರತದ ಕುಸ್ತಿಪಟು ನವೀನ್‌ ಕುಮಾರ್ ಅವರಲ್ಲಿ ಕೋವಿಡ್ ಇರುವುದು ದೃಢಪಟ್ಟಿದೆ. ಹೀಗಾಗಿ ಇಲ್ಲಿ ನಡೆಯುತ್ತಿರುವ ವಿಶ್ವ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಿಂದ ಅವರು ಹಿಂದೆ ಸರಿದಿದ್ದಾರೆ.

ಗ್ರೀಕೊ ರೋಮನ್ ವಿಭಾಗದಲ್ಲಿ ಸ್ಪರ್ಧಿಸುವ ನವೀನ್‌ (97 ಕೆಜಿ ವಿಭಾಗ) ಅವರಿಗೆ ಕೊರೊನಾ ಸೋಂಕು ತಗಲಿರುವುದು ಇದು ಎರಡನೇ ಬಾರಿ. ಕೆಲವು ತಿಂಗಳ ಹಿಂದೆ ಅವರು ಕೋವಿಡ್‌ನಿಂದ ಚೇತರಿಸಿಕೊಂಡಿದ್ದರು.

‘ಪರೀಕ್ಷೆಗಾಗಿ ಬುಧವಾರ ನಮ್ಮ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ನಮ್ಮೆಲ್ಲರ ವರದಿ ‘ನೆಗೆಟಿವ್‘ ಬಂದಿದ್ದು, ನವೀನ್‌ಗೆ ಸೋಂಕು ಖಚಿತಪಟ್ಟಿದೆ. ನಾವು ತಂಗಿದ್ದ ಹೊಟೇಲ್‌ನಲ್ಲೇ ಅವರೂ ಇದ್ದರು. ಆದರೆ ಸೋಂಕಿನ ಯಾವುದೇ ಲಕ್ಷಣಗಳಿಲ್ಲ‘ ಎಂದು ಗ್ರೀಕೊ ರೋಮನ್ ವಿಭಾಗದ ರಾಷ್ಟ್ರೀಯ ಕೋಚ್‌ ಹರಗೋವಿಂದ್ ಸಿಂಗ್ ತಿಳಿಸಿದ್ದಾರೆ.

ಗ್ರೀಕೊ ರೋಮನ್ ಸ್ಪರ್ಧೆಗಳು ಶನಿವಾರ ಆರಂಭವಾಗಲಿವೆ. ನವೀನ್ ಹಿಂದೆ ಸರಿದಿರುವುದರಿಂದ 97 ವಿಭಾಗದಲ್ಲಿ ಭಾರತದ ಪ್ರಾತಿನಿಧ್ಯವಿಲ್ಲ. ಈ ವಿಭಾಗದಲ್ಲಿ ಭಾರತದ ಯಾವುದೇ ಪೈಲ್ವಾನರು ಇನ್ನೂ ಒಲಿಂಪಿಕ್ಸ್ ಟಿಕೆಟ್ ಪಡೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT