ಶನಿವಾರ, ಸೆಪ್ಟೆಂಬರ್ 18, 2021
30 °C

Olympics: ಬಾಕ್ಸರ್‌ ವಿಕಾಸ್ ಕೃಷನ್‌ಗೆ ಗಾಯ, ಒಲಿಂಪಿಕ್ಸ್‌ನಿಂದ ನಿರ್ಗಮನ

ಪಿಟಿಐ Updated:

ಅಕ್ಷರ ಗಾತ್ರ : | |

ಟೋಕಿಯೊ: ಗಾಯಗೊಂಡಿರುವ ಭಾರತದ ಬಾಕ್ಸರ್ ವಿಕಾಸ್ ಕೃಷನ್‌ ಟೋಕಿಯೊ ಒಲಿಂಪಿಕ್ಸ್‌ನಿಂದ ನಿರ್ಗಮಿಸಿದರು. ಇದರೊಂದಿಗೆ 69 ಕೆ.ಜಿ. ವಿಭಾಗದಲ್ಲಿ ಭಾರತದ ಪದಕದ ಕನಸು ಕನಸಾಗಿಯೇ ಉಳಿಯಿತು.

ವಿಕಾಸ್ ಕೃಷ್ಣನ್‌ ಜಪಾನ್‌ನ ಕ್ವಿನ್ಸಿ ಮೆನ್ಸಾ ಒಕಾಜಾವಾ ವಿರುದ್ಧ 0–5ರಿಂದ ಸೋಲನುಭವಿಸಿದರು. ಭುಜದ ಗಾಯದ ಕಾರಣದಿಂದ ಆರಂಭದಿಂದಲೇ ಪಂದ್ಯವು ಅವರ ಹಿಡಿತ ತಪ್ಪಿತ್ತು ಎನ್ನಲಾಗಿದೆ.

ಓದಿ: 

‘ತಂಡವು ಟೋಕಿಯೊಗೆ ತೆರಳುವುದಕ್ಕೂ ಮುನ್ನ ಇಟಲಿಯಲ್ಲಿ ವಿಕಾಸ್ ಕೃಷನ್‌ ಭುಜಕ್ಕೆ ಗಾಯವಾಗಿತ್ತು. ಚಿಕಿತ್ಸೆ ಪಡೆದಿದ್ದು, ಗುಣಮುಖರಾಗುವ ಭರವಸೆ ಇತ್ತು. ಯಾವುದೇ ಸಮಸ್ಯೆ ಇಲ್ಲದೆ ಅಖಾಡಕ್ಕಿಳಿದಿದ್ದರು’ ಎಂದು ಭಾರತದ ಒಲಿಂಪಿಕ್ ಪೂರ್ವ ತರಬೇತಿ ಬಗ್ಗೆ ಉಲ್ಲೇಖಿಸಿ ಭಾರತದ ಬಾಕ್ಸಿಂಗ್ ಹೈ ಪರ್ಫಾರ್ಮೆನ್ಸ್ ನಿರ್ದೇಶಕ ಸ್ಯಾಂಟಿಯಾಗೊ ನಿಯೆವಾ ತಿಳಿಸಿದ್ದಾರೆ.

ಇಂದು ಒಕಾಜಾವಾ ಮತ್ತೆ ವಿಕಾಸ್ ಭುಜದ ಮೇಲೆ ದಾಳಿ ಮಾಡಿದರು. ಹೀಗಾಗಿ ಕೃಷನ್‌ಗೆ ಎಡಗೈಯನ್ನು ಸರಿಯಾಗಿ ಬಳಸಿಕೊಳ್ಳುವುದು ಸಾಧ್ಯವಾಗಲಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಓದಿ: 

ಆರಂಭದಿಂದ ಕೊನೆಯವರೆಗೂ ಒಕಾಜಾವಾ ಹಿಡಿತ ಸಾಧಿಸಿದ್ದರು.

ವಿಕಾಸ್ ಅವರು ಪಂದ್ಯದುದ್ದಕ್ಕೂ ತೀವ್ರ ನೋವಿನಿಂದ ಬಳಲುತ್ತಿದ್ದರು ಎಂದು ಅವರ ಆಪ್ತ ಸ್ನೇಹಿತ ನೀರಜ್ ಗೋಯಟ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು