ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೇಕ್ವಾಂಡೊ ಟ್ರಯಲ್ಸ್‌ಗೆ ಐಒಎ ಮೇಲ್ವಿಚಾರಣೆ

Last Updated 11 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ನವದೆಹಲಿ: ಏಷ್ಯನ್ ಒಲಿಂಪಿಕ್ ಅರ್ಹತಾ ಟೂರ್ನಿಗೆ ಸ್ಪರ್ಧಿಸಲಿರುವ ಭಾರತ ಟೇಕ್ವಾಂಡೊ ತಂಡದ ಆಯ್ಕೆ ಟ್ರಯಲ್ಸ್ ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ಆಶ್ರಯದಲ್ಲಿ ನಡೆಯಲಿದೆ.

ಟ್ರಯಲ್ಸ್‌ ಈ ಮೊದಲು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ನಡೆ ಸಬೇಕೆಂದು ನಿರ್ಧಾರವಾಗಿತ್ತು.

ಭಾರತ ಟೇಕ್ವಾಂಡೊ ಫೆಡರೇಷನ್‌, ರಾಷ್ಟ್ರೀಯ ಕ್ರೀಡಾ ಫೆಡರೇಷನ್ (ಎನ್‌ಎಸ್‌ಎಫ್‌) ಮಾನ್ಯತೆ ಪ‍ಡೆದಿಲ್ಲದ ಕಾರಣ ಸ್ವತಂತ್ರ ಮತ್ತು ಪಾರದರ್ಶಕ ಆಯ್ಕೆಗಾಗಿ ಈ ನಿರ್ಧಾರ ತೆಗೆದು
ಕೊಳ್ಳಲಾಗಿದೆ.

‘ಈ ವಾರದ ಆರಂಭದಲ್ಲಿ ಭಾರತದ ಕ್ರೀಡಾ ಸಚಿವಾಲಯ ಮತ್ತು ಕ್ರೀಡಾ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ನಡುವೆ ಸಭೆ ನಡೆದಿತ್ತು. ಸಭೆಯ ಬಳಿಕ ಏಷ್ಯನ್ ಒಲಿಂಪಿಕ್ ಅರ್ಹತಾಟೇಕ್ವಾಂಡೊ ಮತ್ತು ಪ್ಯಾರಾ ಟೇಕ್ವಾಂಡೊ ಟೂರ್ನಿಗಳ ಆಯ್ಕೆ ಟ್ರಯಲ್ಸ್‌ ಅನ್ನು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ನಡೆಸುವುದು ಎಂದು ತೀರ್ಮಾನಿಸಲಾಗಿದೆ‘ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಏಪ್ರಿಲ್ 15ರಿಂದ 17ರವರೆಗೆ ನಡೆಯಲಿರುವ ಟ್ರಯಲ್ಸ್‌ಗಳನ್ನು ಸಾಯ್ ನಡೆಸಬೇಕಿತ್ತು.

ಟ್ರಯಲ್ಸ್‌ಗೆ ಆರ್ಥಿಕ ಸಹಾಯ ಸೇರಿದಂತೆ ಎಲ್ಲ ಅಗತ್ಯ ನೆರವನ್ನು ಸಾಯ್ ಒದಗಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT