ಶನಿವಾರ, ಜೂನ್ 19, 2021
27 °C

ಸಾಯ್ ಅಥ್ಲೀಟ್‌ಗಳು ಕೋವಿಡ್‌ನಿಂದ ಗುಣಮುಖ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ವೇಗ ನಡಿಗೆ ಕ್ರೀಡಾಪಟು ಕೆ.ಟಿ.ಇರ್ಫಾನ್ ಮತ್ತು ಇತರ ನಾಲ್ವರು ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌ಗಳು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್) ಬೆಂಗಳೂರು ಪ್ರಾದೇಶಿಕ ಕೇಂದ್ರದಲ್ಲಿರುವ ಇವರನ್ನು ಮೇ ಏಳರಂದು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿತ್ತು. ಎರಡನೇ ಪರೀಕ್ಷೆಯ ವರದಿ ನೆಗೆಟಿವ್ ಆಗಿದೆ ಎಂದು ಸಾಯ್ ತಿಳಿಸಿದೆ.

ಸಾಯ್‌ನಲ್ಲಿರುವ ಒಟ್ಟು 22 ಮಂದಿ ಅಥ್ಲೀಟ್‌ಗಳ ಪೈಕಿ ಒಬ್ಬರಲ್ಲಿ ಇನ್ನೂ ಸೋಂಕು ಇದೆ ಎಂದು ಸಾಯ್ ತಿಳಿಸಿದೆ. ಆದರೆ ಅವರ ಮಾಹಿತಿ ಬಹಿರಂಗಗೊಳಿಸಲು ನಿರಾಕರಿಸಿದೆ. ಎಲ್ಲ ಅಥ್ಲೀಟ್‌ಗಳು ಏಪ್ರಿಲ್ 29ರಂದು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ದೇಶದ ವಿವಿಧ ಕಡೆ ಇರುವ ಕ್ರೀಡಾಪಟುಗಳನ್ನು ಒಂದು ವಾರದ ಅವಧಿಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದು ಅದು ಸ್ಪಷ್ಟಪಡಿಸಿದೆ.

ಏಳರಂದು ಒಟ್ಟು 16 ಮಂದಿಯ ಪರೀಕ್ಷೆ ನಡೆಸಲಾಗಿತ್ತು. ಇಬ್ಬರು ಸ್ಟೀಪಲ್ ಚೇಸ್ ಪಟುಗಳು, ಇಬ್ಬರು ಪುರುಷ ವೇಗದ ನಡಿಗೆ ಕ್ರೀಡಾಪಟುಗಳು, ಒಬ್ಬ ಮಧ್ಯಮ ಅಂತರದ ಓಟಗಾರ ಮತ್ತು ದೂರ ಅಂತರದ ಓಟಗಾರ, ಇಬ್ಬರು ಮಧ್ಯಮ ಅಂತರದ ಓಟಗಾರ್ತಿಯರು, ಒಬ್ಬರು ದೂರ ಅಂತರದ ಓಟಗಾರ್ತಿ, ನಾಲ್ವರು ಪ್ಯಾರಾ ಅಥ್ಲೀಟ್‌ಗಳು, ಪ್ಯಾರಾ ಕೋಚ್ ಮತ್ತು ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್‌ ಅಥ್ಲೀಟ್ ಕೂಡ ಇದರಲ್ಲಿ ಸೇರಿದ್ದಾರೆ.

ನೆಗೆಟಿವ್ ವರದಿ ಬಂದಿರುವವರಲ್ಲಿ ಅಥ್ಲೀಟ್‌ಗಳಾದ ಪಿ.ಯು.ಚಿತ್ರಾ, ಸಂದೀಪ್ ಕುಮಾರ್ ಮತ್ತು ‌ಮರಿಯಪ್ಪನ್ ತಂಗವೇಲು, ಹಾಕಿ ಆಟಗಾರರಾದ ಚಿಂಗ್ಲೆನ್ಸಾನಾ ಸಿಂಗ್‌, ವಿವೇಕ್ ಸಾಗರ್‌, ಸಾಯ್ ಸ್ಥಾನಿಕ ಉದ್ಯೋಗಿ ಮತ್ತು ಸಿಬ್ಬಂದಿ ಇದ್ದಾರೆ ಎಂದು ತಿಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು