ತಾಷ್ಕೆಂಟ್: ಭಾರತದ ಜಿಲ್ಲಿ ಡಲಾಬೆಹರಾ ಅವರು ಇಲ್ಲಿ ನಡೆಯುತ್ತಿರುವ ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನ 45 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಜೂನಿಯರ್ ವಿಶ್ವ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತೆ ಜಿಲ್ಲಿ, ಭಾನುವಾರ ಸ್ನ್ಯಾಚ್‌ನಲ್ಲಿ 69 ಹಾಗೂ ಕ್ಲೀನ್ ಆ್ಯಂಡ್ ಜೆರ್ಕ್‌ನಲ್ಲಿ 88 ಕೆಜಿ ಸೇರಿ ಒಟ್ಟು 157 ಕೆಜಿ ಭಾರ ಎತ್ತಿದರು. ಇಬ್ಬರೇ ಸ್ಪರ್ಧಿಗಳು ಇದ್ದ ಕಣದಲ್ಲಿ ಪಿಲಿಪ್ಪೀನ್ಸ್‌ನ ಮೇರಿ ಫ್ಲೊರ್ ಡಿಯಾಜ್, ಒಟ್ಟು 135 ಕೆಜಿ (60 +75 ) ಭಾರ ಎತ್ತಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

45 ಕೆಜಿ ವಿಭಾಗವನ್ನು ಒಲಿಂಪಿಕ್ಸ್ ಅರ್ಹತೆಗೆ ಪರಿಗಣಿಸಲಾಗುವುದಿಲ್ಲ.

2019ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಜಿಲ್ಲಿ ಬೆಳ್ಳಿಪದಕ ಗೆದ್ದುಕೊಂಡಿದ್ದರು. ಆ ಸಂದರ್ಭದಲ್ಲಿ ಅವರು 162 ಕೆಜಿ (71+91) ಭಾರ ಎತ್ತಿದ್ದರು. ಇಲ್ಲಿ ಆ ಸಾಧನೆಯನ್ನು ಉತ್ತಮಪಡಿಸಿಕೊಂಡರು.

ಮೀರಾಬಾಯಿ ಚಾನು (49 ಕೆಜಿ ವಿಭಾಗ) ಅವರು ಶನಿವಾರ ವಿಶ್ವದಾಖಲೆಯೊಂದಿಗೆ ಕಂಚಿನ ಪದಕ ಗೆದ್ದುಕೊಂಡಿದ್ದರು. ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 119 ಕೆಜಿ ಎತ್ತಿ ಈ ಸಾಧನೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.