ಸೋಮವಾರ, ಡಿಸೆಂಬರ್ 5, 2022
19 °C
ಪಿಯು ವಿದ್ಯಾರ್ಥಿಗಳ

ರಾಜ್ಯಮಟ್ಟದ ಜುಡೊ ಚಾಂಪಿಯನ್‌ಷಿಪ್‌: ಬೆಳಗಾವಿ ಮೇಲುಗೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಇಲ್ಲಿ ನಡೆದ ಪದವಿಪೂರ್ವ ಶಿಕ್ಷಣ ಇಲಾಖೆ ಆಶ್ರಯದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಜುಡೊ ಚಾಂಪಿಯನ್‌ಷಿಪ್‌ನಲ್ಲಿ ಬೆಳಗಾವಿ ತಂಡದವರು ಮೇಲುಗೈ ಸಾಧಿಸಿದರು.

ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಚಾಂಷಿಯನ್‌ಷಿಪ್‌ನ ವಿವಿಧ ತೂಕ ವಿಭಾಗಗಳಲ್ಲಿ ಬೆಳಗಾವಿ ಜಿಲ್ಲೆಯ ಐವರು ಬಾಲಕಿಯರು ಹಾಗೂ ನಾಲ್ವರು ಬಾಲಕರು ಪ್ರಥಮ ಸ್ಥಾನ ಪಡೆದುಕೊಂಡರು.

ಚಿಕ್ಕೋಡಿ, ವಿಜಯಪುರ, ಶಿವಮೊಗ್ಗ, ಕಲಬುರಗಿ ಜಿಲ್ಲೆಗಳ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದರು. ವಿವಿಧ ತೂಕ ವಿಭಾಗದಲ್ಲಿ ಕೋಲಾರದ ನಾಲ್ವರು ವಿದ್ಯಾರ್ಥಿನಿಯರಿಗೆ ದ್ವಿತೀಯ ಸ್ಥಾನ ಸಿಕ್ಕಿದೆ. ಬಾಲಕಿಯರ ಪದವಿಪೂರ್ವ ಕಾಲೇಜಿನ ಆರ್.ನಂದುಶ್ರೀ (44 ಕೆ.ಜಿ), ಟಿ.ಸಿ.ರಕ್ಷಿತಾ (57 ಕೆ.ಜಿ). ಬಿ.ನವನೀತಾ (63 ಕೆ.ಜಿ), ವೇಮಗಲ್ ಪಿಯು ಕಾಲೇಜಿನ ಕೆ.ಎಸ್.ಚೈತನ್ಯಾ (70+) ದ್ವಿತೀಯ ಸ್ಥಾನ ಪಡೆದರು.

ಬಾಲಕರ ವಿಭಾಗದಲ್ಲಿ ಬೆಳಗಾವಿ ಜಿಲ್ಲೆಯ ಜೀವನ್ ಶ್ರೀಮಂತ್ ಕಟಪಾಡಿ (40 ಕೆ.ಜಿ), ಸಿ.ಮಹಂತೇಶ್ (45 ಕೆ.ಜಿ), ಅರುಣ್ ಬಿ.ಮಾಲಿ (60 ಕೆ.ಜಿ), ಭರಮಪ್ಪ ಸಿದ್ದಲಿಂಗ ದಳವಾಯಿ (66 ಕೆ.ಜಿ), ಬಿ.ಎಸ್.ರೋಹನ್‌ (81 ಕೆ.ಜಿ) ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಉಳಿದಂತೆ ಶಿವಮೊಗ್ಗದ ಪಿ.ಎಸ್.ಶಶಾಂಕ್ (50 ಕೆ.ಜಿ), ಎಸ್.ಮನೀಷ್ (90+), ವಿಜಯಪುರ ಜಿಲ್ಲೆಯ ಪ್ರಕಾಶ್ ಶಂಕರ್ ಮಾಂಟೆಂಟಾ (55 ಕೆ.ಜಿ), ಕಲಬುರಗಿ ಜಿಲ್ಲೆಯ ಅಭಿಷೇಕ್ ಎಸ್.ಕೋಂಬಿನ್ (90 ಕೆ.ಜಿ) ಪ್ರಥಮ ಸ್ಥಾನ ಗಳಿಸಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ದಾವಣಗೆರೆಯ ಎಸ್.ಕೀರ್ತನಾ (36 ಕೆ.ಜಿ), ವಿಜಯನಗರ ಜಿಲ್ಲೆಯ ಎಂ.ರಕ್ಷಿತಾ (40 ಕೆ.ಜಿ), ಬೆಂಗಳೂರು ಉತ್ತರ ಜಿಲೆಯ ಬಿ.ಕವಿತಾ (48 ಕೆ.ಜಿ), ಬೆಳಗಾವಿ ಜಿಲ್ಲೆಯ ರಕ್ಷಿತಾ ಆರ್.ಕೋಮಾರ್ (52 ಕೆ.ಜಿ), ಐಶ್ವರ್ಯಾ (44 ಕೆ.ಜಿ), ರಾಧಿಕಾ ಸುನೀಲ್ ದುಕಾರೆ (70 ಕೆ.ಜಿ), ಸಾಹೀಶ್ವರಿ ಗಂಗಾರಂ ಕೊಡಚಾವರ್ಕರ್ (70+ ಕೆ.ಜಿ), ಚಿಕ್ಕೋಡಿ ಜಿಲ್ಲೆಯ ವೈಷ್ಣವಿ ಕೃಷ್ಣ ಅಹೇರ್ಕರ್ (57 ಕೆ.ಜಿ), ಪೂಜಾ ಸಚಿನ್ ಸಾಸರೆ ( 63 ಕೆಜಿ) ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು