ಮಂಗಳವಾರ, ಜೂನ್ 15, 2021
24 °C
ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿರುವ ಭಾರತದ ಸ್ಪರ್ಧಿಗಳು

ವೇಟ್‌ ಲಿಫ್ಟಿಂಗ್‌: 18ರಂದು ತಾಷ್ಕೆಂಟ್‌ಗೆ ಜೆರೆಮಿ, ಅಚಿಂತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಯೂತ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ, ಭಾರತದ ಜೆರೆಮಿ ಲಾಲ್‌ರಿನ್ನುಂಗಾ ಮತ್ತು ಅಚಿಂತ ಶೆವುಲಿ ಅವರು ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ಮಂಗಳವಾರ ಉಜ್ಬೆಕಿಸ್ತಾನದ ತಾಷ್ಕೆಂಟ್‌ಗೆ ತೆರಳುವರು. ಮೇ 23ರಿಂದ 31ರವರೆಗೆ ಈ ಚಾಂಪಿಯನ್‌ಷಿಪ್ ನಡೆಯಲಿದೆ.

ಜೆರೆಮಿ (67 ಕೆಜಿ ವಿಭಾಗ) ಹಾಗೂ ಅಚಿಂತ (73 ಕೆಜಿ) ಅವರ ಪ್ರಯಾಣಕ್ಕೆ ವ್ಯವಸ್ಥೆ ಮಾಡಿರುವುದನ್ನು ಭಾರತ ವೇಟ್‌ಲಿಫ್ಟಿಂಗ್ ಫೆಡರೇಷನ್‌ (ಐಡಬ್ಲ್ಯುಎಲ್‌ಎಫ್‌) ಖಚಿತಪಡಿಸಿದೆ.

‘ಇಬ್ಬರು ಸ್ಪರ್ಧಿಗಳ ವಿಮಾನದ ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿದೆ. ಇದೇ 18ರ ಬೆಳಿಗ್ಗೆ ಅವರು ಪ್ರಯಾಣ ಬೆಳೆಸುವರು‘ ಎಂದು ಐಡಬ್ಲ್ಯುಎಲ್‌ಎಫ್‌ ಕಾರ್ಯದರ್ಶಿ ಸಹದೇವ್ ಯಾದವ್ ತಿಳಿಸಿದ್ದಾರೆ.

‘ಉಜ್ಬೆಕಿಸ್ತಾನದಲ್ಲಿ ಕ್ವಾರಂಟೈನ್‌ ಇಲ್ಲ. ಕೋವಿಡ್‌ ‘ನೆಗೆಟಿವ್‌‘ ವರದಿ ಸಲ್ಲಿಸಿದರೆ ಸಾಕು‘ ಎಂದು ಯಾದವ್ ನುಡಿದರು.

ಮುಖ್ಯ ಕೋಚ್‌ ವಿಜಯ್ ಶರ್ಮಾ ಅನುಪಸ್ಥಿತಿಯಲ್ಲಿ, ಕೋಚ್‌ಗಳಾದ ಪ್ರಮೋದ್ ಶರ್ಮಾ ಮತ್ತು ವಿಜಯ್ ರೋಹಿಲ್ಲಾ ಅವರು ಈ ವೇಟ್‌ಲಿಫ್ಟರ್‌ಗಳ ಜೊತೆ ತೆರಳಲಿದ್ದಾರೆ. ವಿಜಯ್ ಅವರು, ಅಮೆರಿಕದಲ್ಲಿ ತರಬೇತಿ ಪಡೆಯುತ್ತಿರುವ ಮೀರಾಬಾಯಿ ಚಾನು ಅವರ ಜೊತೆಯಲ್ಲಿದ್ದಾರೆ. ಮೀರಾಬಾಯಿ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು