ಮಂಗಳವಾರ, ಜನವರಿ 21, 2020
28 °C
ದಕ್ಷಿಣ ವಲಯ ಅಂತರ ವಿವಿ ಪುರುಷರ ಕಬಡ್ಡಿ ಟೂರ್ನಿಯ

ಬೆಂಗಳೂರು, ಮಂಗಳೂರು ವಿವಿ ಉತ್ತಮ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆರಂಭವಾದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಟ್ಟದ ಪುರುಷರ ಕಬಡ್ಡಿ ಟೂರ್ನಿಯ ಮೊದಲ ದಿನ ರಾಜ್ಯದ ಆಟಗಾರರು ಉತ್ತಮ ಪ್ರದರ್ಶನ ನೀಡಿದರು.

ಬೆಂಗಳೂರಿನ ಸೆಂಟ್ರಲ್‌ ವಿವಿ ತಂಡವು 62-42 ಪಾಯಿಂಟ್ಸ್‌ಗಳಿಂದ ಆಂಧ್ರದ ಜವಾಹಾರ್‌ಲಾಲ್ ನೆಹರೂ ತಾಂತ್ರಿಕ ವಿವಿ ವಿರುದ್ಧ ಜಯಗಳಿಸಿತು. ಮೈಸೂರು ವಿವಿ 88-20 ಪಾಯಿಂಟ್ಸ್‌ಗಳಿಂದ ಆಂಧ್ರಪ್ರದೇಶದ ಶ್ರೀಕೃಷ್ಣದೇವರಾಯ ವಿವಿಯನ್ನು ಮಣಿಸಿತು.

ತುಮಕೂರು ವಿವಿಯು 62-22 ಪಾಯಿಂಟ್ಸ್‌ಗಳಿಂದ ಚೆನ್ನೈನ ಸವಿತಾ ವಿವಿ ವಿರುದ್ಧ, ಬೆಂಗಳೂರು ಉತ್ತರ ವಿವಿ 54-27 ಪಾಯಿಂಟ್ಸ್‌ಗಳಿಂದ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿವಿ ವಿರುದ್ಧ, ಬೆಂಗಳೂರಿನ ಪಿಇಎಸ್‌ ವಿವಿ 74–51 ವಿಶಾಖಪಟ್ಟಣಂನ ಗೀತಂ ವಿವಿ ವಿರುದ್ಧ ಜಯಗಳಿಸಿತು.

ಧಾರವಾಡದ ಕರ್ನಾಟಕ ವಿವಿ 48–42 ಪಾಯಿಂಟ್ಸ್‌ಗಳಿಂದ ಕೇರಳ ವಿವಿ ವಿರುದ್ಧ, ದಾವಣಗೆರೆ ವಿವಿ 48–19ರಿಂದ ಶ್ರೀಕಾಕುಳಂನ ಡಾ.ಬಿ.ಆರ್.ಅಂಬೇಡ್ಕರ್ ವಿವಿಯನ್ನು, ಮಂಗಳೂರಿನ ಯೇನಪೋಯ ವಿವಿಯು 53–43 ಅಂತರದಲ್ಲಿ ಹುಬ್ಬಳ್ಳಿಯ ಕಾನೂನು ವಿವಿಯನ್ನು ಪರಾಭವಗೊಳಿಸಿತು.

ಬೆಂಗಳೂರಿನ ಕೃಷಿ ವಿಜ್ಞಾನ ವಿವಿಯು  67–28 ಅಂತರದಲ್ಲಿ ಜವಹಾರ್‌ಲಾಲ್‌ ನೆಹರೂ ಕೃಷಿ ಹಾಗೂ ಫೈನ್‌ ಆರ್ಟ್ಸ್‌ ವಿವಿ ವಿರುದ್ಧ, ಬೆಂಗಳೂರಿನ ಕ್ರೈಸ್ಟ್‌ ವಿವಿಯು 61–47 ಪಾಯಿಂಟ್ಸ್‌ಗಳಿಂದ ತಿರುವರೂರು ಸೆಂಟ್ರಲ್‌ ವಿವಿಯನ್ನು, ಶಿವಮೊಗ್ಗದ ಕುವೆಂಪು ವಿವಿಯು 68–28ರಿಂದ ತಿರುಪತಿಯ ಶ್ರೀವೆಂಕಟೇಶ್ವರ ವಿವಿಯನ್ನು ಮಣಿಸಿತು.

ದಕ್ಷಿಣ ಭಾರತದ 6 ರಾಜ್ಯಗಳಿಂದ 70 ವಿಶ್ವವಿದ್ಯಾಲಯಗಳು ಪಾಲ್ಗೊಂಡಿವೆ. ಮಂಗಳೂರು ವಿಶ್ವವಿದ್ಯಾಲಯ ಹಾಗೂ ಕಳೆದ ಬಾರಿಯ ಟೂರ್ನಿಯಲ್ಲಿ ಮೊದಲ 4 ಸ್ಥಾನ ಪಡೆದ ವಿಶ್ವವಿದ್ಯಾಲಯಗಳು ನೇರವಾಗಿ ಕ್ವಾರ್ಟರ್ ಪೈನಲ್‌ ಪ್ರವೇಶಿಸಿವೆ.

4 ಅಂಕಣಗಳಲ್ಲಿ ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ಹಗಲು ಹಾಗೂ ಹೊನಲು ಬೆಳಕಿನಲ್ಲಿ ಪಂದ್ಯಗಳು ನಡೆಯಲಿವೆ. ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತೆಂಕನಿಡಿಯೂರು  ಜಂಟಿ ಆಶ್ರಯದಲ್ಲಿ ಟೂರ್ನಿ ನಡೆಯುತ್ತಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು