ಏಷ್ಯನ್ ಗೇಮ್ಸ್ಗೆ ಕರಾಟೆ ಸೇರ್ಪಡೆ

ಮುಂಬೈ : ಚೀನಾದ ಹಾಂಗ್ಝೌದಲ್ಲಿ ನಡೆಯಲಿರುವ 2022ರ ಏಷ್ಯನ್ ಕ್ರೀಡೆಗಳಿಗೆ ಮೂರು ಕ್ರೀಡೆಗಳು– ಕರಾಟೆ, ಸ್ಪೋರ್ಟ್ಸ್ ಕ್ಲೈಬಿಂಗ್ ಮತ್ತು ಬೇಸ್ಬಾಲ್/ ಸಾಫ್ಟ್ಬಾಲ್ (ಎರಡಲ್ಲಿ ಒಂದು) ಸೇರ್ಪಡೆಗೊಳ್ಳಲಿವೆ. ಇದರಿಂದ ಏಷ್ಯನ್ ಗೇಮ್ಸ್ನಲ್ಲಿ ಒಟ್ಟು ಸ್ಪರ್ಧಾ ವಿಭಾಗಗಳ ಸಂಖ್ಯೆ 40 ಆಗಲಿದೆ ಎಂದು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ) ತಿಳಿಸಿದೆ.
ಈ ಮೂರು ಕ್ರೀಡೆಗಳು ಮುಂದಿನ ವರ್ಷ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ನಲ್ಲಿ ಈಗಾಗಲೇ ಸೇರಿಕೊಂಡಿವೆ. ಒಲಿಂಪಿಕ್ಸ್ನಲ್ಲಿ 33 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
ಆದರೆ ಯಾವ ಯಾವ ಕ್ರೀಡೆಗಳು ಇರಲಿವೆ ಎಂಬುದನ್ನು ಒಸಿಎ ಇನ್ನೂ ನಿರ್ಧರಿಸಿಲ್ಲ. ಆದರೆ ಇವು 40 ವಿಭಾಗಗಳಲ್ಲಿ 51 ಸ್ಥಳಗಳಲ್ಲಿ ನಡೆಯಬೇಕೆಂದು ನಿರ್ಧಾರವಾಗಿದೆ.
‘ಹಾಂಗ್ಝೌನಲ್ಲಿ ನಡೆಯುವ 19ನೇ ಏಷ್ಯನ್ ಗೇಮ್ಸ್ ಇದುವರೆಗಿನ ಅತ್ಯುತ್ತಮ ಎನಿಸಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ’ ಎಂದು ಒಸಿಎ ಮಹಾ ನಿರ್ದೇಶಕ ಹುಸೇನ್ ಅಲ್ ಮೊಸಲಮ್ ಹೇಳಿಕೆಯಲ್ಲಿ ತಿಳಿಸಿದರು. ಏಷ್ಯನ್ ಗೇಮ್ಸ್ ಆರಂಭಕ್ಕೆ ಇನ್ನು ಸರಿಯಾಗಿ ಮೂರು ವರ್ಷ (2022ರ ಸೆ. 10 ರಿಂದ 25) ಬಾಕಿಯಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.