ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಯನ್‌, ಕೋಲಾರ ಮೂಲದ ದಿಗ್ಗಜ ಅಥ್ಲಿಟ್‌ ಕೆನೆತ್‌ ಪೋವಲ್‌ ನಿಧನ

Last Updated 11 ಡಿಸೆಂಬರ್ 2022, 10:41 IST
ಅಕ್ಷರ ಗಾತ್ರ

ಬೆಂಗಳೂರು:ಒಲಿಂಪಿಯನ್‌, 1970ರ ‘ಏಷ್ಯನ್‌ ಗೇಮ್ಸ್‌’ನಲ್ಲಿ ಕಂಚಿನ ಪದಕ ಗೆದ್ದಿದ್ದ ಕರ್ನಾಟಕದ ದಿಗ್ಗಜ ಅಥ್ಲಿಟ್‌ ಕೆನೆತ್‌ ಪೋವೆಲ್‌ ಅವರು ಭಾನುವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಭಾರತೀಯ ಅಥ್ಲೆಟಿಕ್‌ ಫೆಡರೇಷನ್‌ ಕಂಬನಿ ಮಿಡಿದಿದೆ.

1960ರ ದಶದಕದಲ್ಲಿ ಕೆನೆತ್‌ ಪೋವೆಲ್‌ಅವರು ಭಾರತ ಪ್ರಮುಖ ಓಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದರು. 1970ರ ಏಷ್ಯನ್ ಗೇಮ್ಸ್‌ನ 4x100m ರಿಲೆಯಲ್ಲಿ ಅವರು ಕಂಚಿನ ಪದಕ ಗೆದ್ದಿದ್ದರು.

82 ವರ್ಷ ವಯಸ್ಸಿನ ಕೆನೆತ್‌ ಪೋವೆಲ್‌ ಅವರು, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಹಳೆ ಮೈಸೂರು ಭಾಗದ ಪ್ರಪ್ರಥಮ ಕ್ರೀಡಾಪಟುವೂ ಹೌದು.

ಕರ್ನಾಟಕಕ್ಕೆ ಅರ್ಜುನ ಪ್ರಶಸ್ತಿಯನ್ನು ತಂದುಕೊಟ್ಟ ಮೊದಲಿಗರೂ ಕೂಡ. ಭಾರತದ ಪರ ಅವರು ಅನೇಕ ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ.

ಕೋಲಾರದ ಕೆಜಿಎಫ್‌ನಲ್ಲಿ ಜನಿಸಿದ ಕೆನೆತ್‌ಅಣ್ಣಸ್ವಾಮಿ ಮೊದಲಿಯಾರ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದಿದ್ದರು. 1970ರ ವರೆಗೆ ಅವರು ಕ್ರೀಡಾ ರಂಗದಲ್ಲಿ ಸಕ್ರಿಯರಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT