ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12ನೇ ವಿಶ್ವ ಟೆನ್‌–ಕೆ ಮ್ಯಾರಥಾನ್‌: ಚೆಲಿಮೊ ಪ್ರಮುಖ ಆಕರ್ಷಣೆ

ನಾಳೆ ಬೆಂಗಳೂರಿನಲ್ಲಿ 12ನೇ ವಿಶ್ವ ಟೆನ್‌–ಕೆ ಮ್ಯಾರಥಾನ್‌
Last Updated 17 ಮೇ 2019, 19:21 IST
ಅಕ್ಷರ ಗಾತ್ರ

ಬೆಂಗಳೂರು: ಟಾಟಾ ಕನ್ಸಲ್ಟನ್ಸಿ ಸರ್ವಿಸ್‌ (ಟಿಸಿಎಸ್) 12ನೇ ವಿಶ್ವ ಟೆನ್‌–ಕೆ ಮ್ಯಾರಥಾನ್‌ –2019 ಸ್ಪರ್ಧೆಯು ಭಾನುವಾರ ನಡೆಯಲಿದ್ದು ಬೆಂಗಳೂರು ನಗರವು ಎಲ್ಲ ರೀತಿಯಲ್ಲಿ ಸಜ್ಜಾಗಿದೆ.

ಕೀನ್ಯಾ ಮೂಲದ ಬಹ್ರೇನ್‌ ದೇಶವನ್ನು ಪ್ರತಿನಿಧಿಸುವದೀರ್ಘ ಅಂತರದ ಓಟಗಾರ್ತಿ ರೋಸ್‌ ಚೆಲಿಮೊ ಕೂಟದ ಪ್ರಮುಖ ಆಕರ್ಷಣೆಯಾಗಿದ್ದಾರೆ.

2016ರ ಒಲಿಂಪಿಕ್ಸ್‌ನ ಮಹಿಳಾ ಮ್ಯಾರಥಾನ್‌ನಲ್ಲಿ ಅವರು 8ನೇ ಸ್ಥಾನ ಪಡೆದಿದ್ದರು. 2017ರಲ್ಲಿ ಐಎಎಎಫ್‌ ವಿಶ್ವ ಚಾಂಪಿಯನ್‌ ಕೂಡ ಆಗಿದ್ದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘20 ಕೀ.ಮೀ.ಗಿಂತ 10 ಕಿ.ಮೀ ಮ್ಯಾರಥಾನ್‌ ಕಠಿಣವಾದದ್ದು. ಸ್ಪರ್ಧೆಗಾಗಿ ತರಬೇತಿ ಕೂಡ ಪಡೆದಿದ್ದು, ಭಾರೀ ಸಿದ್ಧತೆಯೊಂದಿಗೆ ಇಲ್ಲಿಗೆ ಬಂದಿದ್ದೇನೆ’ ಎಂದರು.

ಕೀನ್ಯಾದಲ್ಲಿ ಹುಟ್ಟಿ ಬಹ್ರೇನ್ ದೇಶವನ್ನು ಪ್ರತಿನಿಧಿಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕೀನ್ಯಾದಲ್ಲಿ ಅಥ್ಲೀಟ್‌ಗಳ ಪ್ರತಿಭೆಯನ್ನು ಗುರುತಿಸುವುದು ಕಡಿಮೆಯಾಗುತ್ತಿದೆ. ಅಲ್ಲದೆ ಕೀನ್ಯಾದಲ್ಲಿ ಅಥ್ಲೀಟ್‌ಗಳ ಮಧ್ಯೆ ವಿಪರೀತ ಸ್ಪರ್ಧೆ ಇದೆ ಎಂದರು.

ಅಥ್ಲೀಟ್‌ಗಳಾದ ಜೆಫ್ರಿ ಕೋಯಿಚ್‌ ಹಾಗೂ ಎಗ್ನೆಸ್‌ ಟೈರಪ್‌ ಹಾಗೂ ಪಾಲ್‌ ತಾನುಯಿ ಅವರು ಸ್ಪರ್ಧೆಗೆ ಸಿದ್ಧವಾದ ರೀತಿ, ಪದಕ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಹಲವು ಪ್ರಮುಖ ಸ್ಪರ್ಧಿಗಳು ಭಾಗಿ: ಪುರುಷರ10ಕೆ ಸ್ಪರ್ಧೆ ಯಲ್ಲಿ27:11 ನಿಮಿಷಗಳಲ್ಲಿ ಗುರಿ ಮುಟ್ಟಿದ ದಾಖಲೆ ಹೊಂದಿರುವ ಕೀನ್ಯಾದ ಮ್ಯಾಥ್ಯು ಕಿಮೇಲಿ, ವಿನ್ಸೆಂಟ್‌ ಕಿಪ್ರೊಟಿಚ್‌, ಮಹಿಳಾ ಸ್ಪರ್ಧಿಗಳಾದ ಇಥಿಯೋಪಿಯಾದ ಶೆಹಾಯ್‌ ಗೆಮೆಚು, ಸೆನ್ಬೇರ್‌ ಟೆಪೆರಿ ಬೆಂಗಳೂರು 10ಕೆಯಲ್ಲಿ ಸ್ಪರ್ಧಿಸುತ್ತಿರುವ ಅಂತರರಾಷ್ಟ್ರೀಯ ಮಟ್ಟದ ಎಲೀಟ್‌ ಅಥ್ಲೀಟ್‌ಗಳಾಗಿದ್ದಾರೆ.

ಕಾಂಟಿನೆಂಟಲ್‌ ಕೋಟಾದಡಿ ಭಾರತದ ಪುರುಷ ಅಥ್ಲೀಟ್‌ಗಳಾದ ಅಭಿಷೇಕ್‌ ಪಾಲ್‌, ಲಕ್ಷ್ಮಣನ್‌ ಗೋವಿಂದನ್‌, ಪ್ರದೀಪ್‌ ಸಿಂಗ್‌ ಚೌಧರಿ ಮತ್ತಿತರರುಭಾಗವಹಿಸಲಿರುವರು. ಇನ್ನು ಮಹಿಳಾ ಅಥ್ಲೀಟ್‌ಗಳಾದ ಸಂಜೀವನಿ ಜಾಧವ್‌, ಸ್ವಾತಿ ಗಾಡ್ವೆ, ಕಿರಣ್‌ ಸಹದೇವ್‌ ಮುಂತಾದವರು ಸವಾಲಿಗೆ ಸಜ್ಜಾಗಲಿದ್ದಾರೆ.

ಓಟದ ಸಮಯ

ಮುಕ್ತ ಮಹಿಳಾ ಮತ್ತು ಪುರುಷ 10ಕೆ ಸ್ಪರ್ಧೆಯು ಬೆಳಿಗ್ಗೆ 5:30ಕ್ಕೆ ಆರಂಭವಾಗಲಿದೆ. ಕಂಠೀರವ ಕ್ರೀಡಾಂಗಣದಲ್ಲಿ ಅಥ್ಲೀಟ್‌ಗಳು ಸೇರಲಿದ್ದು ಅಲ್ಲಿಂದ ವಿವಿಧ ಮಾರ್ಗಗಳ ಮೂಲಕ ಸಾಗಿ ಕಸ್ತೂರಬಾ ರಸ್ತೆಯಲ್ಲಿ ಸ್ಪರ್ಧೆ ಕೊನೆಗೊಳಿಸಲಿದ್ದಾರೆ. ಎಲೀಟ್‌ ಮಹಿಳಾ ಸ್ಪರ್ಧೆಯು ಬೆಳಗ್ಗೆ 7:10ಕ್ಕೆ ಆರಂಭವಾದರೆ, ಎಲೀಟ್‌ ಪುರುಷ ಅಥ್ಲೀಟ್‌ಗಳ ಸ್ಪರ್ಧೆಯು ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ.

ಮಜಾ ರನ್‌ ಸ್ಪರ್ಧೆಯು ಬೆಳಿಗ್ಗೆ 8:50ಕ್ಕೆ ಹಾಗೂ ಹಿರಿಯ ನಾಗರಿಕರ ಸ್ಪರ್ಧೆಯು ಬೆಳಿಗ್ಗೆ 8:10ಕ್ಕೆ ಆರಂಭವಾಗಲಿದೆ. ವಿಕಲಚೇತನರ ಸ್ಪರ್ಧೆಯು ಬೆಳಿಗ್ಗೆ 8:10ಕ್ಕೆ ಆರಂಭವಾಗಲಿದೆ.

ಒಟ್ಟು ಬಹುಮಾನ ಮೊತ್ತ ₹ 1.49 ಕೋಟಿ

ಬೆಂಗಳೂರು ವಿಶ್ವ 10ಕೆ ಓಟದ ಸ್ಪರ್ಧೆಯ ಒಟ್ಟು ಬಹುಮಾನ ಮೊತ್ತ ₹ 1.49 ಕೋಟಿ ಆಗಿದೆ. ಮೊದಲ ಸ್ಥಾನ ಪಡೆದ ಪ್ರತೀ ಪುರುಷ ಹಾಗೂ ಮಹಿಳಾ ಸ್ಪರ್ಧಿಗಳು ₹ 18 ಲಕ್ಷ ಜೇಬಿಗಿಳಿಸಲಿದ್ದಾರೆ. ಐದು ಸ್ಪರ್ಧೆಗಳಲ್ಲಿ ಅಂದಾಜು 25 ಸಾವಿರ ಜನರು ಭಾಗವಹಿಸಲಿರುವರು.

ಎಲೀಟ್‌ ಅಥ್ಲೀಟ್‌ಗಳ ಸ್ಪರ್ಧೆ ಅಲ್ಲದೆ, ಮುಕ್ತ 10ಕೆ ಸ್ಪರ್ಧೆ, ಮಜಾ ರನ್‌ (5 ಕಿ.ಮೀ), ಹಿರಿಯ ನಾಗರಿಕರ ಓಟ ಹಾಗೂ ವಿಕಲಚೇತನರ ಓಟದ (ಎರಡೂ 4.2 ಕಿ.ಮೀ) ಕೂಟದ ಆಕರ್ಷಣೆಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT