ಮಂಗಳವಾರ, ಫೆಬ್ರವರಿ 7, 2023
27 °C

129 ಕೆಜಿ ಭಾರ ಎತ್ತಿದ ಆಳ್ವಾಸ್‌ ಕಾಲೇಜಿನ ಆ್ಯನ್‌ ಮರಿಯಾ ರಾಷ್ಟ್ರೀಯ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖೇಲೊ ಇಂಡಿಯಾ ವಾರ್ಸಿಟಿ ಕ್ರೀಡಾಕೂಟ: ಮಂಗಳೂರು ವಿಶ್ವವಿದ್ಯಾಲಯದ ಆಳ್ವಾಸ್‌ ಕಾಲೇಜು ವಿದ್ಯಾರ್ಥಿನಿ ಆ್ಯನ್‌ ಮರಿಯಾ ಅವರು ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಜೈನ್ ವಿವಿ ಆವರಣದಲ್ಲಿ ಬುಧವಾರ ಬೆಳಿಗ್ಗೆ ನಡೆದ ಮಹಿಳೆಯರ ವೇಟ್ ಲಿಫ್ಟಿಂಗ್ ನ 87+ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದರು.

ಕ್ಲೀನ್ ಆ್ಯಂಡ್‌ ಜರ್ಕ್‌ನಲ್ಲಿ ಅವರ ದಾಖಲೆ‌ ಮೂಡಿತು. ಅವರು 129 ಕೆಜಿ ಭಾರ ಎತ್ತಿದರು. ಒಟ್ಟಾರೆ 230 ಕೆಜಿ ಎತ್ತಿ ಚಿನ್ನದ ಪದಕ ಗೆದ್ದುಕೊಂಡರು. ಕ್ಲೀನ್ ಆ್ಯಂಡ್‌ ಜರ್ಕ್‌ನಲ್ಲಿ 128 ಕೆಜಿ ಭಾರ ಎತ್ತಿದ ಮನ್ ಪ್ರೀತ್ ಕೌರ್ ಹೆಸರಿನಲ್ಲಿ ಈ ವರೆಗೆ ರಾಷ್ಟ್ರೀಯ ದಾಖಲೆ ಇತ್ತು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು