ಬುಧವಾರ, ಜನವರಿ 22, 2020
24 °C

ಖೇಲೊ ಇಂಡಿಯಾ: ಸೈಕ್ಲಿಂಗ್‌ನಲ್ಲಿ ರಾಜ್ಯಕ್ಕೆ 4 ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗುವಾಹಟಿಯಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ಯೂತ್ ಗೇಮ್ಸ್‌ನ ಸೈಕ್ಲಿಂಗ್‌ ಸ್ಪರ್ಧೆಗಳ ಮೊದಲ ದಿನವೇ ಕರ್ನಾಟಕ ನಾಲ್ಕು ಪದಕಗಳನ್ನು ಗಳಿಸಿದೆ. ಭಾನುವಾರ ಕರ್ನಾಟಕದ ಸೈಕ್ಲಿಸ್ಟ್‌ಗಳು ಒಂದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಬಗಲಿಗೆ ಹಾಕಿಕೊಂಡಿದ್ದಾರೆ.

21 ವರ್ಷದೊಳಗಿನ ಪುರುಷರ 30 ಕಿಮೀ ವೈಯಕ್ತಿಕ ಟೈಂ ಟ್ರಯಲ್‌ನಲ್ಲಿ ರಾಜು ಭಾಟಿ 41 ನಿಮಿಷ, 5.179 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದುಕೊಂಡರು. ಇದೇ ವಯೋಮಾನದ  ಮಹಿಳೆಯರ 20 ಕಿಮೀ ವೈಯಕ್ತಿಕ ಟೈಂ ಟ್ರಯಲ್‌ನಲ್ಲಿ 31 ನಿಮಿಷ 5.423 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಮೇಘಾ ಗೂಗಾಡ ಬೆಳ್ಳಿ ಪದಕ ಗಳಿಸಿದರು. ಸೌಮ್ಯಾ ಅಂತಾಪುರ (31 ನಿಮಿಷ 33.206 ಸೆಕೆಂಡು) ಕಂಚಿನ ಪದಕ ಗೆದ್ದರು.

17 ವರ್ಷದೊಳಗಿನ ಬಾಲಕರ 20 ಕಿಮೀ ವೈಯಕ್ತಿಕ ಟೈ ಟ್ರಯಲ್‌ನಲ್ಲಿ ಸಂಪತ್ ಪಾಸ್ಮೇಲ (27 ನಿಮಿಷ 55.685 ಸೆಕೆಂಡು) ಕಂಚಿನ ಪದಕ ಗಳಿಸಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು