ಬುಧವಾರ, ಮೇ 25, 2022
23 °C

ಫುಟ್‌ಬಾಲ್‌: ಮೈಕಲ್ ಹ್ಯಾಟ್ರಿಕ್‌ ಗೋಲು, ಅಂಬೇಡ್ಕರ್‌ ಎಫ್‌ಸಿಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೈಕಲ್ ಗಳಿಸಿದ ಹ್ಯಾಟ್ರಿಕ್ ಗೋಲುಗಳು ಅಂಬೇಡ್ಕರ್‌ ಎಫ್‌ಸಿಗೆ ಜಯ ತಂದುಕೊಟ್ಟವು.

ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ (ಬಿಡಿಎಫ್‌ಎ) ಸಿ ಡಿವಿಷನ್‌ ಲೀಗ್‌ನ ‘ಐ’ ಗುಂಪಿನ ಪಂದ್ಯದಲ್ಲಿ ಶುಕ್ರವಾರ ಅಂಬೇಡ್ಕರ್ ಎಫ್‌ಸಿ 4–0ಯಿಂದ ಸರ್ವಜ್ಞನಗರ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು.

ಮತ್ತೊಂದು ಹಣಾಹಣಿಯಲ್ಲಿ ಅಗರಂ ಎಫ್‌ಸಿ 1–0ಯಿಂದ ಕ್ವೀನ್ಸ್‌ಸ್ಟಾರ್ ವಿರುದ್ಧ ಜಯಿಸಿತು.

‘ಎ’ ಗುಂಪಿನ ಪಂದ್ಯದಲ್ಲಿ ಸರ್ಕಾರಿ ಮುದ್ರಣಾಲಯ ತಂಡವು ಎಕ್ಲೆಸಿಯರ್ಸ್ ಎಫ್‌ಸಿಯೊಂದಿಗೆ ಗೋಲುರಹಿತ ಡ್ರಾ ಸಾಧಿಸಿತು.

‘ಡಿ’ ಗುಂಪಿನ ಪಂದ್ಯಗಳಲ್ಲಿ ಯಂಗ್ ಜೆಮ್ಸ್ ಎಫ್‌ಸಿ 1–0ಯಿಂದ ವಿಜಯನಗರ ಎಫ್‌ಸಿ ಎದುರು ಗೆದ್ದರೆ, ಬಸವನಗುಡಿ ಎಫ್‌ಸಿಗೆ ವಿವೇಕಾನಂದ ಎಫ್‌ಸಿ ಎದುರು ವಾಕ್‌ಓವರ್ ಲಭಿಸಿತು. 

ಕೆಎಸ್‌ಎಫ್‌ಎ ‘ಸಿ‘ ಡಿವಿಷನ್‌ ಲೀಗ್ ಟೂರ್ನಿಯ ಜೆ ಗುಂಪಿನ ಪಂದ್ಯದಲ್ಲಿ ಬೆಂಗಳೂರು ಅರೋಸ್‌ 3–1ರಿಂದ ಎಫ್ಎಸ್‌ಕೆ ಎದುರು ಜಯಿಸಿತು. ಬ್ರದರ್ಸ್‌ ಎಫ್‌ಸಿ, ಸಮಂತ್‌ ಎಫ್‌ಸಿಯೊಂದಿಗೆ ಗೋಲುರಹಿತ ಡ್ರಾ ಸಾಧಿಸಿತು.

‘ಎನ್‌‘ ಗುಂಪಿನ ಹಣಾಹಣಿಯಲ್ಲಿ ಜೊಗೊ ಬೊರಿಟೊ ಸಾಕರ್ಸ್ 2–0ಯಿಂದ ಜಿಆರ್‌ಕೆ ಫುಟ್‌ಬಾಲ್ ಯೂತ್ ಎಫ್‌ಸಿ ಎದುರು, ‘ಓ’ ಗುಂಪಿನ ಪಂದ್ಯದಲ್ಲಿ ವಿಕ್ಟೋರಿಯಾ ಎಫ್‌ಸಿ 3–0ಯಿಂದ ಕಮ್ಮನಹಳ್ಳಿ ವಿರುದ್ಧ ಜಯ ಸಾಧಿಸಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು