ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ನೆಟ್‌ಬಾಲ್‌ ಫೆಡರೇಷನ್‌ ಸಹಾಯಕ ಕಾರ್ಯದರ್ಶಿಯಾಗಿ ಮಾನಸಾ ಆಯ್ಕೆ

Last Updated 24 ಆಗಸ್ಟ್ 2020, 12:00 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಎಲ್‌.ಜಿ. ಮಾನಸಾ ಅವರು ಭಾರತ ನೆಟ್‌ಬಾಲ್ ಫೆಡರೇಷನ್‌ನ (ಎನ್‌ಎಫ್‌ಐ) ಸಹಾಯಕ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಫೆಡರೇಷನ್‌ನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಚುನಾವಣೆಯು ಭಾನುವಾರ ನಿಗದಿಯಾಗಿತ್ತು. ಆದರೆ ಸಮಿತಿಯ 28 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.

ಮಾನಸಾ ಅವರು ಕರ್ನಾಟಕ ಅಮೆಚೂರ್‌ ನೆಟ್‌ಬಾಲ್‌ ಸಂಸ್ಥೆ (ಎಎನ್‌ಬಿಎಕೆ) ಜಂಟಿ ಕಾರ್ಯದರ್ಶಿಯಾಗಿದ್ದಾರೆ.

ರಾಷ್ಟ್ರಮಟ್ಟದ ನೆಟ್‌ಬಾಲ್‌ ಟೂರ್ನಿಗಳಲ್ಲಿ ಅವರು ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ. ಬೆಂಗಳೂರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ತಂಡಗಳಿಗೂ ಆಡಿದ್ದಾರೆ. 2016ರಿಂದ ಅವರು ಬಿಎಮ್‌ಎಸ್‌ ಮಹಿಳಾ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಚುನಾವಣಾ ರಿಟರ್ನಿಂಗ್‌ ಅಧಿಕಾರಿಯಾಗಿ ಅಲಹಾಬಾದ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಾ. ಸತೀಶ್‌ ಚಂದ್ರ ಹಾಗೂಸಹಾಯಕ ಅಧಿಕಾರಿಯಾಗಿ ಭಾರತ ಚುನಾವಣಾ ಆಯೋಗದ ನಿವೃತ್ತ ಕಾರ್ಯದರ್ಶಿ ಹರ್ಬನ್ಸ್ ಸಿಂಗ್‌ ಕಾರ್ಯನಿರ್ವಹಿಸಿದರು. ಹರಿಯಾಣದ ಗುರುಗ್ರಾಮದಲ್ಲಿ ಫೆಡರೇಷನ್‌ನ ವಾರ್ಷಿಕ ಸಾಮಾನ್ಯ ಸಭೆಯು ಭಾನುವಾರ ನಡೆಯಿತು.

ಪದಾಧಿಕಾರಿಗಳು: ಅಧ್ಯಕ್ಷ: ವಾಗೀಶ್‌ ಪಾಠಕ್‌.

ಹಿರಿಯ ಉಪಾಧ್ಯಕ್ಷ: ಹರಿ ಓಂ ಕೌಶಿಕ್‌.

ಪ್ರಧಾನ ಕಾರ್ಯದರ್ಶಿ: ವಿಜೇಂದರ್‌ ಸಿಂಗ್‌,

ಖಜಾಂಚಿ: ಮೋಹಿತ್‌ ಕೌಶಿಕ್‌.

ಉಪಾಧ್ಯಕ್ಷರು: ವೀಣಾಪಾಣಿ ದಾಸ್‌, ದೀಪ್‌ ಕುಮಾರ್‌, ಇಶಾ ಗುಪ್ತಾ, ಗೌರಿಶಂಕರ್‌ ಶುಕ್ಲಾ, ಲಲಿತ್‌ ಎಚ್‌.ಜೀವಾನಿ, ಮೊಹಮ್ಮದ್‌ ಖಾಜಾ ಖಾನ್‌, ಪಿ.ಕೆ.ಪಾಂಡಾ.

ಸಹಾಯಕ ಕಾರ್ಯದರ್ಶಿಗಳು: ಅಮಿತ್‌ ಅರೋರಾ, ಅಶೋಕ್‌ ಕುಮಾರ್‌, ಬಿರ್ಜು ರಾಮ್‌, ಲಕ್ಷ್ಮಣ್‌ ಡಟೀರ್‌, ಮಾನಸಾ ಎಲ್‌.ಜಿ, ಸಂತೋಷ್‌ ಕುಮಾರ್‌, ವಿಭಾ ಕುಮಾರಿ.

ಕಾರ್ಯಕಾರಿ ಸದಸ್ಯರು: ಅಸೀಮ್‌ ಬೋತ್ರಾ, ಭೀಮ್ ಖಾಟಿ, ಭೂಪೇಂದ್ರನಾಥ ರಾಮ್‌, ಹರ್‌ಪಾಲ್‌ ಸಿಂಗ್‌, ಮನೀಶ್‌ ಕುಮಾರ್‌ ಪಟೇಲ್‌, ನಿಧಿ ಶರ್ಮಾ, ಪೂಜಾ ಯಾದವ್‌, ಸಂಪಾ ಲಾಸ್ಕರ್‌, ಶಶಿಕಾಂತ್‌, ತನುಜಾ ನಜಮುದೀನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT