ಮಂಗಳವಾರ, ಏಪ್ರಿಲ್ 20, 2021
30 °C

ಲಾಂಗ್‌ಜಂಪ್‌: ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ ಮುರಳಿ ಶ್ರೀಶಂಕರ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಟಿಯಾಲ: ಭಾರತದ ಲಾಂಗ್‌ ಜಂಪ್ ಪಟು ಮುರಳಿ ಶ್ರೀಶಂಕರ್‌ ಅವರು ಮಂಗಳವಾರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ಫೆಡರೇಷನ್ ಕಪ್ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಅವರು 8.26 ಮೀಟರ್‌ ಸಾಧನೆ ಮಾಡಿ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡರು.

ಈ ವಿಭಾಗದಲ್ಲಿ ಒಲಿಂಪಿಕ್ಸ್‌ಗೆ ಅರ್ಹತಾ ಮಾನದಂಡ 8.22 ಮೀ. ಆಗಿತ್ತು. ಕೇರಳದ 21 ವರ್ಷದ ಮುರಳಿ ಅವರು ಚಾಂಪಿಯನ್‌ಷಿಪ್‌ನಲ್ಲಿ ಐದನೇ ಪ್ರಯತ್ನದಲ್ಲಿ ಈ ಗುರಿ (8.26) ತಲುಪಿದರು. 2018ರಲ್ಲಿ ಅವರು 8.20 ಮೀ. ಮೂಲಕ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದರು.

ಈ ವಿಭಾಗದಲ್ಲಿ ಸ್ಪರ್ಧಿಸಿದ್ದ ಕರ್ನಾಟಕದ ಎಸ್‌.ಲೋಕೇಶ್ (7.60 ಮೀ.) ಕಂಚಿನ ಪದಕ ತಮ್ಮದಾಗಿಸಿಕೊಂಡರು. ಕೇರಳದ ಮತ್ತೋರ್ವ  ತಾರೆ ಮುಹಮ್ಮದ್ ಅನೀಸ್ ಯಾಹ್ಯಾ (8 ಮೀ.) ಎರಡನೇ ಸ್ಥಾನ ಗಳಿಸಿದರು.

ನಡಿಗೆ ಸ್ಪರ್ಧಿಗಳಾದ ಕೆ.ಟಿ.ಇರ್ಫಾನ್‌, ಸಂದೀಪ್ ಕುಮಾರ್‌, ರಾಹುಲ್ ರೋಹಿಲ್ಲಾ (ಪುರುಷರ 20 ಕಿ.ಮೀ. ವಿಭಾಗ), ಭಾವನಾ ಜಾಟ್‌ ಹಾಗೂ ಪ್ರಿಯಾಂಕಾ ಗೋಸ್ವಾಮಿ (ಮಹಿಳೆಯರ 20 ಕಿ.ಮೀ. ವಿಭಾಗ) ಈಗಾಗಲೇ ಒಲಿಂಪಿಕ್ಸ್ ಟಿಕೆಟ್‌ ಗಳಿಸಿದ್ದಾರೆ. ಜಾವೆಲಿನ್ ಪಟುಗಳಾದ ನೀರಜ್ ಚೋಪ್ರಾ, ಶಿವಪಾಲ್ ಸಿಂಗ್, 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಅವಿನಾಶ್ ಸಬ್ಳೆ ಅಲ್ಲದೆ  4X400 ಮೀ. ಮಿಶ್ರ ರಿಲೇ ತಂಡವು ಕೂಡ ಈಗಾಗಲೇ ಟೋಕಿಯೊಗೆ ಟಿಕೆಟ್ ಪಡೆದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.