ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾರ್ಮುಲಾ 2: ಕುಶ್‌ ಮೈನಿಗೆ ಮೂರನೇ ಸ್ಥಾನ

Last Updated 1 ಏಪ್ರಿಲ್ 2023, 13:06 IST
ಅಕ್ಷರ ಗಾತ್ರ

ಮೆಲ್ಬರ್ನ್‌ (ಪಿಟಿಐ): ಭಾರತದ ಯುವ ಚಾಲಕ ಕುಶ್‌ ಮೈನಿ ಅವರು ಮೆಲ್ಬರ್ನ್‌ನಲ್ಲಿ ಶನಿವಾರ ನಡೆದ ಫಾರ್ಮುಲಾ 2 ರೇಸ್‌ನಲ್ಲಿ ಮೂರನೇ ಸ್ಥಾನ ಪಡೆದರು. ಕ್ಯಾಂಪಸ್‌ ರೇಸಿಂಗ್‌ ತಂಡವನ್ನು ಪ್ರತಿನಿಧಿಸಿದ ಕುಶ್‌, ಫಾರ್ಮುಲಾ 2 ರೇಸ್‌ನಲ್ಲಿ ‘ಪೋಡಿಯಂ ಫಿನಿಷ್‌’ ಮಾಡಿದ್ದು ಇದೇ ಮೊದಲು.

ಗ್ರಿಡ್‌ನಲ್ಲಿ ಮೂರನೆಯವರಾಗಿ ಸ್ಪರ್ಧೆ ಆರಂಭಿಸಿದ್ದ ಮೈನಿ, ಹಲವು ಲ್ಯಾಪ್‌ಗಳವರೆಗೆ ಅದೇ ಸ್ಥಾನ ಕಾಪಾಡಿಕೊಂಡಿದ್ದರು. ಆ ಬಳಿಕ ಡಿಎಎಂಎಸ್‌ ತಂಡದ ಆರ್ಥರ್‌ ಲೆಕ್ಲರ್ಕ್‌ ಅವರು ಮೈನಿ ಅವರನ್ನು ಹಿಂದಿಕ್ಕಿದರು. ಆದರೆ ಅಂತಿಮ ಕೆಲವು ಲ್ಯಾಪ್‌ಗಳ ರೇಸ್‌ ಬಾಕಿಯಿರುವಾಗ ಮೈನಿ ಮತ್ತೆ ಮೂರನೇ ಸ್ಥಾನ ಪಡೆದರಲ್ಲದೆ, ಕೊನೆಯವರೆಗೂ ಕಾಪಾಡಿಕೊಂಡರು.

‘ಈ ಹಿಂದೆ ಹಲವು ಸಲ ಪೋಡಿಯಂ ಫಿನಿಷ್‌ನ ಸನಿಹ ಬಂದಿದ್ದರೂ, ವಿಫಲನಾಗಿದ್ದೆ. ಚೊಚ್ಚಲ ಪೋಡಿಯಂ ಫಿನಿಷ್‌ ಸಾಧನೆ ಮಾಡಿರುವುದು ಸಂತಸ ಉಂಟುಮಾಡಿದೆ. ಈ ಋತುವಿನಲ್ಲಿ ಇನ್ನೂ ಹಲವು ರೇಸ್‌ಗಳು ಇರುವುದರಿಂದ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು ಮುಖ್ಯ’ ಎಂದು ಮೈನಿ ಪ್ರತಿಕ್ರಿಯಿಸಿದ್ದಾರೆ.

ಎಂಪಿ ಮೋಟರ್‌ಸ್ಪೋರ್ಟ್‌ ತಂಡದ ಡೆನಿಸ್‌ ಹಾಗೆರ್‌ ಮತ್ತು ಹೈಟೆಕ್‌ ಪಲ್ಸ್‌ ಎಯ್ಟ್‌ ತಂಡದ ಜಾಕ್‌ ಕ್ರಾಫರ್ಡ್‌ ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡರು.

ಎಂಪಿ ಮೋಟರ್‌ಸ್ಪೋರ್ಟ್‌ ತಂಡವನ್ನು ಪ್ರತಿನಿಧಿಸಿದ ಭಾರತದ ಚಾಲಕ ಜೆಹಾನ್‌ ದಾರೂವಾಲಾ 17ನೇ ಸ್ಥಾನ ಗಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT