ಬೆಂಗಳೂರು: ಮಲ್ನಾಡ್ ಫಾಲ್ಕನ್ಸ್ ತಂಡವು ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಲೀಗ್‌ನ ಸೂಪರ್ ಲೀಗ್ ಹಂತದಲ್ಲಿ ಶುಭಾರಂಭ ಮಾಡಿತು. ಗುರುವಾರ ನಡೆದ ಸೆಣಸಾಟದಲ್ಲಿ ತಂಡವು 6–1ರಿಂದ ಮಂಡ್ಯ ಬುಲ್ಸ್ ತಂಡಕ್ಕೆ ಸೋಲುಣಿಸಿತು.

ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ (ಕೆಬಿಎ) ಅಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಫಾಲ್ಕನ್ಸ್ ಪಾರಮ್ಯ ಮೆರೆಯಿತು.

ಫಾಲ್ಕನ್ಸ್ ಸೋಲಿನೊಂದಿಗೆ ಅಭಿಯಾನ ಆರಂಭಿಸಿತು. ಮಹಿಳಾ ಸಿಂಗಲ್ಸ್ ಹಣಾಹಣಿಯಲ್ಲಿ ಫಾಲ್ಕನ್ಸ್‌ನ ಧ್ರುತಿ ಯತೀಶ್15-12, 12-15, 10-15ರಿಂದ ಅನನ್ಯಾ ಪ್ರವೀಣ್ ಎದುರು ಎಡವಿದರು. ಪುರುಷರ ಡಬಲ್ಸ್‌ನಲ್ಲೂ ಪೃಥ್ವಿ ರಾಯ್–ವೆಂಕಟೇಶ್ ಪ್ರಸಾದ್ ಜೋಡಿ5-15, 15-8, 12-15ರಿಂದ ಆಶಿತ್ ಸೂರ್ಯ–ಮಧುಸೂದನ್ ಎಂ. ವಿರುದ್ಧ ಮಣಿದರು. ಇದರೊಂದಿಗೆ ಬುಲ್ಸ್ 2–0 ಮುನ್ನಡೆ ಸಾಧಿಸಿತು.

ಈ ಹಂತದಲ್ಲಿ ಆಟ ರಂಗು ಪಡೆದುಕೊಂಡಿತು. ಪುರುಷರ ಸಿಂಗಲ್ಸ್ ‘ಟ್ರಂಪ್‘ ಪಂದ್ಯದಲ್ಲಿ ಮಿಥುನ್15-7, 15-7ರಿಂದ ಅನಿರುದ್ಧ ದೇಶಪಾಂಡೆ ಅವರನ್ನು ಮಣಿಸುವ ಮೂಲಕ ಸ್ಕೋರ್ ಸಮಬಲಗೊಳಿಸಿದರು. ಈ ಜಯದಿಂದ ಉತ್ಸಾಹ ಪಡೆದ ಶಮಂತ್ ಕಿದಿಯೂರ್–ಧ್ರುತಿ ಯತೀಶ್ ಮಿಶ್ರ ಡಬಲ್ಸ್ ‘ಟ್ರಂಪ್‘ ಹಣಾಹಣಿಯಲ್ಲಿ13-15, 15-11, 15-14ರಿಂದ ಸಾಯಿ ಪ್ರತೀಕ್ –ಅನನ್ಯಾ ಪ್ರವೀಣ್ ಅವರನ್ನು ಅವರನ್ನು ಪರಾಭಗೊಳಿಸಿದರು. ಫಾಲ್ಕನ್ಸ್ ಮುನ್ನಡೆ ಹೆಚ್ಚಿತು.

ಕೊನೆಯ ‘ಸೂಪರ್‘ ಸೆಣಸಾಟದಲ್ಲಿ ಪೃಥ್ವಿ ರಾಯ್, ಮಿಥುನ್, ಶಮಂತ್21-18ರಿಂದ ಆಶಿತ್ ಸೂರ್ಯ/ಸಾಯಿ ಪ್ರತೀಕ್/ಮಧುಸೂದನ್ ಅವರನ್ನು ಮಣಿಸಿ ಫಾಲ್ಕನ್ಸ್ ಸಂಭ್ರಮ ಇಮ್ಮಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.