ಸೋಮವಾರ, ಆಗಸ್ಟ್ 8, 2022
22 °C

ಬ್ಯಾಡ್ಮಿಂಟನ್‌: ಮಾಳವಿಕ ಫೈನಲ್‌ಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೌನಾಸ್‌, ಲಿಥುವೇನಿಯ: ಭಾರತದ ಮಾಳವಿಕ ಬಾನ್ಸೊದ್ ಇಲ್ಲಿ ನಡೆಯುತ್ತಿರುವ ಆರ್‌ಎಸ್‌ಎಲ್ ಲಿಥುವೇನಿಯನ್ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದಾರೆ. ಭಾನುವಾರ ನಡೆದ ಸೆಮಿಫೈನಲ್‌ನಲ್ಲಿ ಅವರು ಫ್ರಾನ್ಸ್‌ನ ಅನಾ ತತ್ರನೋವಾ ಎದುರು 21-13, 21-10ರಲ್ಲಿ ಜಯ ಗಳಿಸಿದರು.

ಮೂರನೇ ಶ್ರೇಯಾಂಕದ ಭಾರತದ ಆಟಗಾರ್ತಿ ಪ್ರಶಸ್ತಿಗಾಗಿ ನಾಲ್ಕನೇ ಶ್ರೇಯಾಂಕದ ರಾಚೆಲ್ ಡರಾಗ್‌ ಎದುರು ಸೆಣಸುವರು.

ಮೊದಲ ಸುತ್ತಿನಲ್ಲಿ ಮಾಳವಿಕ ಸ್ಥಳೀಯ ಆಟಗಾರ್ತಿ ವಿಲ್ಟೆ ಪೌಲಾಸ್ಕೇಟ್‌ ಎದುರು 21-6, 21-10ರಲ್ಲಿ ಜಯ ಗಳಿಸಿದ್ದರು. ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಸ್ರಾಯೆಲ್‌ನ ಹೇಲಿ ನೇಮನ್ ಎದುರು 21-10, 21-11ರಲ್ಲಿ ಜಯ ಗಳಿಸಿದ್ದ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರಿಯಾದ ಕ್ಯಾತ್ರಿನ್ ನೆಡಲ್ಡ್‌ ವಿರುದ್ಧ 21-12, 21-9ರಲ್ಲಿ ಗೆಲುವು ಸಾಧಿಸಿದ್ದರು.

19 ವರ್ಷದ ಮಾಳವಿಕ ಕಳೆದ ತಿಂಗಳು ನಡೆದ ಆಸ್ಟ್ರಿಯನ್ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು