ಬುಧವಾರ, ಫೆಬ್ರವರಿ 26, 2020
19 °C
ವಿಶ್ವ ಚಾಂಪಿಯನ್‌ಷಿಪ್‌ಗೆ ಭರ್ಜರಿ ಸಿದ್ಧತೆ

ಪ್ರೆಸಿಡೆಂಟ್ಸ್ ಕಪ್‌ ಬಾಕ್ಸಿಂಗ್ ಟೂರ್ನಿ: ಮೇರಿ ಕೋಮ್‌ಗೆ ಬಂಗಾರ

ಪಿಟಿಐ Updated:

ಅಕ್ಷರ ಗಾತ್ರ : | |

ನವ ದೆಹಲಿ: ಆರು ಬಾರಿಯ ವಿಶ್ವ ಚಾಂಪಿಯನ್‌ ಮೇರಿ ಕೋಮ್‌ ಪ್ರೆಸಿಡೆಂಟ್ಸ್ ಕಪ್‌ ಬಾಕ್ಸಿಂಗ್ ಟೂರ್ನಿಯಲ್ಲಿ ಸುಲಭ ಜಯ ಸಂಪಾದಿಸಿ ಚಿನ್ನ ಗೆದ್ದುಕೊಂಡರು. ಇಂಡೊನೇಷ್ಯಾದ ಲಬುವಾನ್‌ ಬಾಜೊನಲ್ಲಿ ನಡೆಯುತ್ತಿರುವ ಟೂರ್ನಿಯ 51 ಕೆಜಿ ವಿಭಾಗದಲ್ಲಿ ಅವರು ಪಾರಮ್ಯ ಮೆರೆದರು.

ಫೈನಲ್‌ ಪಂದ್ಯದಲ್ಲಿ ಅವರು ಆಸ್ಟ್ರೇಲಿಯಾದ ಎಪ್ರಿಲ್‌ ಫ್ರಾಂಕ್ಸ್ ಅವರನ್ನು 5–0 ಅಂತರದಿಂದ ಮಣಿಸಿದರು. 36 ವರ್ಷದ ಭಾರತದ ಬಾಕ್ಸರ್‌ ಮೇ ತಿಂಗಳಲ್ಲಿ ನಡೆದ ಇಂಡಿಯಾ ಓಪನ್‌ ಬಾಕ್ಸಿಂಗ್‌ ಟೂರ್ನಿಯಲ್ಲೂ ಸ್ವರ್ಣ ಪದಕ ಗೆದ್ದಿದ್ದರು. ಆದರೆ ಒಲಿಂಪಿಕ್‌ ಅರ್ಹತೆಯ ಅವಕಾಶವನ್ನು ವೃದ್ಧಿಸಿಕೊಳ್ಳುವ ಮಹದುದ್ದೇಶದಿಂದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಆಡಿರಲಿಲ್ಲ. 

ಹೋದ ವರ್ಷ ದೆಹಲಿಯಲ್ಲಿ ನಡೆದ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಮೇರಿ ಆರನೇ ಪ್ರಶಸ್ತಿ ಜಯಿಸಿದ್ದರು. 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಅವರು ರಷ್ಯಾದ ಯೆಕಟೆರಿನ್‌ಬರ್ಗ್‌ನಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಸೆಪ್ಟೆಂಬರ್‌ 7ರಿಂದ 21ರವರೆಗೆ 2019ರ ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು