ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಬೆಹಾ, ಫೆಕೆಡೆ ಚಾಂಪಿಯನ್‌

ಮಿಡ್‌ನೈಟ್‌ ಮ್ಯಾರಥಾನ್‌: ಇಥಿಯೋಪಿಯಾ ಪ್ರಾಬಲ್ಯ
Last Updated 8 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಇಥಿಯೋಪಿಯಾದ ಜೈಕ್‌ ಅಟ್ಲಾವ್‌ ದೆಬೆಹಾ ಹಾಗೂ ಫೆಕೆಡೆ ಸಿಮ್‌ಜೆನ್‌ ತಿಲಾಹುನ್‌ ಅವರು ಶನಿವಾರ ನಡೆದ ಬೆಂಗಳೂರು ಮಿಡ್‌ನೈಟ್‌ ಫುಲ್‌ ಮ್ಯಾರಥಾನ್‌ ನಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ಚಿನ್ನಗೆದ್ದರು.

ಜೈಕ್‌ ಅಟ್ಲಾವ್‍ ದೆಬೆಹಾ 42. 195 ಕಿ.ಮೀ. ಗುರಿಯನ್ನು 2 ಗಂಟೆ 22 ನಿಮಿಷ 01:.21 ಸೆಕೆಂಡುಗಳಲ್ಲಿ ಕೊನೆಗೊಳಿಸಿದರು. ಎರಡನೇ ಸ್ಥಾನವನ್ನು ಇಥಿಯೋಪಿಯಾದ ಡೆಗೆಫಾ ಮೆರ್ಗಾ ( 2 ಗಂಟೆ 22 ನಿಮಿಷ 01.67 ಸೆಕೆಂಡುಗಳು) ಸ್ಥಾನ ಗಳಿಸಿದರು. ಇಥಿಯೋಪಿಯಾದ ಬಿಕಿಲೆ ಅಬೆಬೆ ಆಸೆಫ್‌ (2 ಗಂಟೆ 32 ನಿಮಿಷ 12 ಸೆಕೆಂಡುಗಳಲ್ಲಿ ಗುರಿ ತಲುಪಿ ತೃತೀಯ ಸ್ಥಾನ ಪಡೆದರು. ಮಹಿಳಾ ವಿಭಾಗದ ಮುಕ್ತ ಫುಲ್‌ ಮ್ಯಾರಥಾನ್‌ನಲ್ಲಿ ಫೆಕೆದೆ ಸಿಮ್‌ಜೆನ್‌ ತಿಲಾಹುನ್‌ (3 ಗಂ. 2 ಸೆಂ) ಮೊದಲ ಸ್ಥಾನ, ಇಥೊಯೋಪಿಯಾದವರೇ ಆದ ಹೇ ಮೆಗ್ರೆಟು ಗೆಮೆಚು (3 ಗಂ. 26 ಸೆಂ.) ಬೆಳ್ಳಿ ಹಾಗೂ ಕೀನ್ಯಾದ ಸ್ಯಾಲಿ ಜೆಬಿವೊಟ್‌ (3 ಗಂ. 13 ನಿಮಿಷ 36 ಸೆಂ.) ಕಂಚು ತಮ್ಮದಾಗಿಸಿಕೊಂಡರು.

10ಕೆ ಮುಕ್ತ ವಿಭಾಗದಲ್ಲೂ ಇಥಿಯೋಪಿಯಾ ಪ್ರಾಬಲ್ಯ: ಪುರುಷರ 10ಕೆ ವಿಭಾಗದಲ್ಲಿ ಇಥಿಯೋಪಿಯಾದ ಹುಮ್ನೇಶ್‍ ಹೈಲುಟಿಚಾ 31 ನಿಮಿಷ 31 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಪಡೆದರು. ಇಥಿ ಯೋಪಿಯಾದಅಬೆಬೆ ಫೆಕಾದೆ (31 ನಿ. 45 ಸೆ.) ದ್ವಿತೀಯ ಸ್ಥಾನ ಪಡೆದರು. ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ಶಿವಂ ಯಾದವ್‍32 ನಿಮಿಷ 4 ಸೆಕೆಂಡುಗಳಲ್ಲಿ ಗುರಿ ತಲುಪಿ ತೃತೀಯ ಸ್ಥಾನ ಪಡೆದರು.

ಶಿವಂ, ಸ್ಮಿತಾಗೆ ಚಿನ್ನ

ಪುರುಷರ 10ಕೆ ಓಟದಲ್ಲಿಶಿವಂ ಯಾದವ್‍ 32 ನಿಮಿಷ 4 ಸೆಕೆಂಡುಗಳಲ್ಲಿ ಗುರಿ ಸೇರಿ ಮೊದಲಿಗರಾದರು. ಇದೇ ವಿಭಾಗದ ದ್ವಿತೀಯ ಸ್ಥಾನವನ್ನು ಎಂಇಜಿ ಕೇಂದ್ರದ ಎಂ.ಡಿ.ಧೋನೆಶ್‍ (32 ನಿ. 44 ಸೆ.) ಪಡೆದರು. ಬೆಂಗಳೂರಿನ ತಾರಾಚಂದ್‍ (32 ನಿ. 46 ಸೆ.) ಗುರಿ ತಲುಪಿ ಕಂಚಿನ ಪದಕ ಗಳಿಸಿದರು.

ಭಾರತೀಯ ಮಹಿಳಾ ವಿಭಾಗದ 10ಕೆ ಓಟದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಸ್ಮಿತಾ 40 ನಿಮಿಷ 59 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನದ ಪದಕ ಕೊರಳಿಗೇರಿಸಿಕೊಂಡರು. ಭಾರತೀಯ ಕ್ರೀಡಾ ಪ್ರಾಧಿಕಾರದ ಕೆ.ಬಿ ಹರ್ಷಿತಾ (43 ನಿ.24 ಸೆ.)ನಲ್ಲಿ ದ್ವಿತೀಯ ಹಾಗೂಫರ್ಹೀನ್‍ (45 ನಿ. 31 ಸೆ.) ಗುರಿ ತೃತೀಯ ಸ್ಥಾನ ಗಳಿಸಿದರು.

ಇತರ ಫಲಿತಾಂಶಗಳು

ಮುಕ್ತ ವಿಭಾಗದ ಪುರುಷರ ಹಾಫ್‌ ಮ್ಯಾರಥಾನ್‌: ಅಲ್ಕನಾ ಲ್ಯಾಂಗರ್‌ (ಕೀನ್ಯಾ, 1 ಗಂಟೆ 5 ನಿಮಿಷ 11 ಸೆಕೆಂಡು, ಪ್ರಥಮ), ಹೆನ್ರಿ ಕಿರ್ಪೊನೊ (ಕೀನ್ಯಾ, 1 ಗಂ. 5 ನಿ. 13 ಸೆ. ದ್ವಿತೀಯ), ಉರ್ಗೆಕು ಬಶೆಟು (ಕೀನ್ಯಾ, 1 ಗಂ. 5 ನಿ. 22 ಸೆ. ತೃತೀಯ). ಮುಕ್ತ ವಿಭಾಗದ ಮಹಿಳಾ ಹಾಫ್‌ ಮ್ಯಾರಥಾನ್‌: ಅಲೈಸ್‌ ಜೊಕಿ (ಕೀನ್ಯಾ, 1 ಗಂ. 27 ನಿ. 29 ಸೆ. ಪ್ರಥಮ), ಯಿಗೆಜು ಬೆಲಾಯ್ನಿಶ್‌ ಶಿಫೆಟಾ (ಇಥಿಯೋಪಿಯಾ, 1 ಗಂ. 27 ನಿ. 30 ಸೆ. ದ್ವಿತೀಯ), ಗಾಶು ಸಮ್ರಾವಿತ್‌ ನೆಗಾ (1 ಗಂ. 27 ನಿ. 32 ಸೆ. ತೃತೀಯ). ಭಾರತೀಯ ವಿಭಾಗದ ಪುರುಷರ ಹಾಫ್‌ ಮ್ಯಾರಥಾನ್‌: ಪ್ರವೀಣ್‌ ಜಯವಂತ್‌ (ಸಾಯ್‌, 1 ಗಂ. 10 ನಿ. 5 ಸೆ. ಪ್ರಥಮ), ಅಂಬುಕುಮಾರ್‌ (ಎಂಇಜಿ, 1 ಗಂ. 12 ನಿ. 3 ಸೆ. ದ್ವಿತೀಯ), ಶಿಜು ಕೆ(ಎಂಇಜಿ, 1 ಗಂ. 14 ನಿ. 8 ಸೆ. ತೃತೀಯ). ಭಾರತೀಯ ವಿಭಾಗದ ಮಹಿಳಾ ಹಾಫ್‌ ಮ್ಯಾರಥಾನ್‌: ನೂತನ್‌ (ದೆಹಲಿ, 1 ಗಂ. 34 ನಿ. 38 ಸೆ. ಪ್ರಥಮ), ಆಕೃತಿ (ಇನ್ಫೋಸಿಸ್‌ ಬೆಂಗಳೂರು, 1 ಗಂ. 48 ನಿ. 46 ಸೆ. ದ್ವಿತೀಯ), ಶಾಲಿನಿ (ಇನ್ಫೋಸಿಸ್‌ ಬೆಂಗಳೂರು, 2 ಗಂ. 8 ನಿ. 25 ಸೆ. ತೃತೀಯ). ಭಾರತೀಯ ವಿಭಾಗದ ಪುರುಷರ ಫುಲ್‌ ಮ್ಯಾರಥಾನ್‌: ಚಂದನ್‌ ಕುಮಾರ್‌ (ಬೆಂಗಳೂರು ವಿವಿ ವಿದ್ಯಾರ್ಥಿ, 2 ಗಂ. 58 ನಿ. 54 ಸೆ, ಪ್ರಥಮ), ಶ್ರೇಯಸ್‌ (ಬೆಂಗಳೂರು, 3 ಗಂ. 3 ನಿ. 26 ಸೆ. ದ್ವಿತೀಯ), ಸಾಗರ್‌ ರಾಯ್‌ (ಅಸ್ಸಾಂ, 3 ಗಂ, 32 ನಿ. 8 ಸೆ. ತೃತೀಯ).

ಭಾರತೀಯ ವಿಭಾಗದ ಮಹಿಳೆಯರ ಫುಲ್‌ ಮ್ಯಾರಥಾನ್‌: ಲಕ್ಷ್ಮೀ (ಸಾಯ್‌ ಬೆಂಗಳೂರು, 3 ಗಂ. 32 ನಿ. 48 ಸೆ. ಪ್ರಥಮ), ಬಿಂದು ಜುನೇಜಾ (ಬೆಂಗಳೂರು, 4 ಗಂ. 20 ನಿ. 6 ಸೆ. ದ್ವಿತೀಯ), ಶಾಮಲಾ (ಐಟಿ ಉದ್ಯಮಿ 5 ಗಂ, 1 ನಿ. 40 ಸೆ. ತೃತೀಯ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT