ಶನಿವಾರ, ಜನವರಿ 23, 2021
19 °C

ಏಷ್ಯನ್ ಫಾರ್ಮುಲಾ 3 ಚಾಂಪಿಯನ್‌ಷಿಪ್‌ಗೆ ಮುಂಬೈ ಫಾಲ್ಕನ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪ್ರತಿಷ್ಠಿತ ಏಷ್ಯನ್ ಫಾರ್ಮುಲಾ 3 ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಮೊದಲ ಭಾರತೀಯ ತಂಡ ಎನ್ನುವ ಹಿರಿಮೆಗೆ ಮುಂಬೈ ಫಾಲ್ಕನ್ಸ್ ಪಾತ್ರರಾಗಲಿದೆ. ಜನವರಿ 26ರಂದು ದುಬೈನಲ್ಲಿ ಈ ಚಾಂಪಿಯನ್‌ಷಿಪ್‌ ಆರಂಭವಾಗಲಿದ್ದು, ಫೆಬ್ರುವರಿ 20ರಂದು ಅಬುಧಾಬಿಯಲ್ಲಿ ಕೊನೆಗೊಳ್ಳಲಿದೆ.

ಮುಂಬೈ ಫಾಲ್ಕನ್ಸ್ ತಂಡವನ್ನು ಫಾರ್ಮುಲಾ 2 ತಾರೆ ಜೆಹಾನ್ ದಾರೂವಾಲಾ ಹಾಗೂ ಬ್ರಿಟಿಷ್ ಫಾರ್ಮುಲಾ 3 ರನ್ನರ್-ಅಪ್ ಬೆಂಗಳೂರಿನ ಖುಷ್ ಮೈನಿ ಮುನ್ನಡೆಸಲಿದ್ದಾರೆ ಎಂದು ಬುಧವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಜೆಹಾನ್ ದಾರುವಾಲಾ, ಕೆಲ ವಾರಗಳ ಹಿಂದಷ್ಟೇ ಎಫ್‌2 ರೇಸ್‌ನಲ್ಲಿ ಗೆಲುವು ಸಾಧಿಸಿದ ಮೊದಲ ಭಾರತೀಯ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು.

ಖುಷ್ ಮೈನಿ ಏಷ್ಯನ್ ಕಾರ್ಟಿಂಗ್ ರೇಸ್‌ನಲ್ಲಿ ಜಯ ಸಾಧಿಸಿದ ಭಾರತದ ಅತಿಕಿರಿಯ ಎನಿಸಿಕೊಂಡಿದ್ದು, ಹಲವು ಬಾರಿ ಕಾರ್ಟಿಂಗ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಫಾರ್ಮುಲಾ ವಿಭಾಗಗಳಲ್ಲಿ ಗೆಲುವು ದಾಖಲಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.