ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರ ಜಿಲ್ಲಾ ಕ್ರೀಡಾಕೂಟ: ಮುತ್ತಣ್ಣ, ಪರೀಕ್ಷಾ ಶ್ರೇಷ್ಠ ಅಥ್ಲೀಟ್ಸ್‌

Last Updated 24 ಅಕ್ಟೋಬರ್ 2021, 20:42 IST
ಅಕ್ಷರ ಗಾತ್ರ

ಬೆಂಗಳೂರು: ಬಿಎಸ್‌ಸಿಯ ಮುತ್ತಣ್ಣ ಕೆ.ವೈ ಮತ್ತು ಅಂಜು ಬಾಬಿ ಜಾರ್ಜ್ ಸಂಸ್ಥೆಯ ಪರೀಕ್ಷಾ ಅವರು ಭಾನುವಾರ ಮುಕ್ತಾಯಗೊಂಡ ಬೆಂಗಳೂರು ನಗರ ಜಿಲ್ಲಾ ಅಥ್ಲೆಟಿಕ್ಸ್ ಕೂಟದ 16 ವರ್ಷದೊಳಗಿನವರ ವಿಭಾಗದಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದ ಶ್ರೇಷ್ಠ ಅಥ್ಲೀಟ್ಸ್‌ ಪ್ರಶಸ್ತಿ ಗಳಿಸಿದರು.

ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆಯ ಆಶ್ರಯದಲ್ಲಿ ನಡೆದ ಕೂಟದ 14 ವರ್ಷದೊಳಗಿನವರ ವಿಭಾಗದಲ್ಲಿ ಕ್ರಮವಾಗಿ ಬಿಎಸ್‌ಸಿಯ ಮೋನಿಷ್ ಚಂದ್ರಶೇಕರ್‌ ಮತ್ತು ಅದ್ವಿಕಾ ಎ–ಕಸ್ತೂರಿ ವೇಳಂಕರ್, 12 ವರ್ಷದೊಳಗಿನವರ ವಿಭಾಗದಲ್ಲಿ ಕ್ರಮವಾಗಿ ವಿಎನ್‌ಎಸ್‌ನ ಸಮನ್ಯು ಆರ್‌ ಮತ್ತು ಆರ್‌ವೈಎಸ್‌ನ ಚೇತನ ಭಾಸ್ಕರ್ ಶ್ರೇಷ್ಠ ಅಥ್ಲೀಟ್ಸ್‌ ಎನಿಸಿಕೊಂಡರು.

ಎರಡನೇ ದಿನದ ಫಲಿತಾಂಶಗಳು: 16 ವರ್ಷದೊಳಗಿನವರ ವಿಭಾಗದ ಬಾಲಕರು: 80 ಮೀ ಹರ್ಡಲ್ಸ್‌: ಲಿನೆಲ್ ಜೋಶುವಾ (ಸೇಂಟ್ ಜೋಸೆಫ್ಸ್‌)–1. ಕಾಲ: 12.4ಸೆ, ನಮಿಶ್ ಆರ್.ಶೆಟ್ಟಿ (ಇಂಡಿಯನ್ ಅಥ್ಲೆಟಿಕ್ಸ್‌ ಅಕಾಡೆಮಿ)–2, ಸನತ್ ಪಾಟೀಲ್ (ವಿದ್ಯಾನಿಕೇತನ್)–3; ಜಾವೆಲಿನ್ ಥ್ರೋ: ವೈಭವ್ ರಾಜ್ (ಡಿವೈಇಎಸ್‌)–1. ದೂರ:28.62 ಮೀ, ಧನುಷ್ ಕೃಷ್ಣ (ಆರ್‌ಎನ್‌ಎಸ್‌ಐಎಸ್‌)–2, ತಮೋಜ್ಞ (ವಿಎನ್‌ಎಸ್‌)–3; 400 ಮೀ ಓಟ: ನೋಯಲ್ ಜೋಸೆಫ್‌ (ಬಿಎಸ್‌ಸಿ)–1. ಕಾಲ: 53.9 ಸೆ, ಮುತ್ತಣ್ಣ ಕೆ.ವೈ (ಬಿಎಸ್‌ಸಿ)–2, ಪ್ರತೀಕ್ (ಬಿಎಸ್‌ಸಿ)–3; ಲಾಂಗ್ ಜಂಪ್: ಚುಲೇಶ್ವರ್ ನಾಯಕ್ (ಲೆಮಿನಾಸ್ ಎಸ್‌ಸಿ)–1. ಅಂತರ: 5.84 ಮೀ, ಲಿನೆಲ್ ಜೋಶುವಾ (ಸೇಂಟ್ ಜೋಸೆಫ್ಸ್‌)–2, ಮೊಹಮ್ಮದ್ ಅಲಿ ಖಾಣ್ (ಎಲೈಟ್‌)–3.

ಬಾಲಕಿಯರ ವಿಭಾಗ: 80 ಮೀ ಹರ್ಡಲ್ಸ್‌: ಭುವನ (ಬಿಎಸ್‌ಸಿ)–1. ಕಾಲ: 14.8 ಸೆ, ದೀಕ್ಷಾ ಡಿ (ಬಿಎಸ್‌ಸಿ)–2, ಅನುಶ್ರೀ ರಾಜ್ (ಸ್ಪೀಡ್‌)–3; ಲಾಂಗ್ ಜಂಪ್: ಪರೀಕ್ಷಾ (ಅಂಜು ಬಾಬಿ)–1. ದೂರ: 5.54 ಮೀ, ಜನಿಸ್ ರೊಸಾರಿಯೊ (ಬಿಎಸ್‌ಸಿ)–2, ವನೇಸಾ ವಿವಿಯನ್ (ಬಿಎಸ್‌ಸಿ)–3; ಜಾವೆಲಿನ್ ಥ್ರೋ: ಗಾಯತ್ರಿ ನಾಯರ್ (ಬಿಎಸ್‌ಸಿ)–1. ಅಂತರ: 20.01 ಮೀ, ಸನ್ನಿಧಿ ರಾವ್‌ (ಆರ್‌ಎನ್‌ಎಸ್‌ಐಸ್‌)–2, ಪೂರ್ವಿ ಆಶ್ರಿತ್‌ (ಆರ್‌ಎನ್‌ಎಸ್‌ಐಎಸ್‌)–3; 400 ಮೀ ಓಟ: ಶ್ರೇಯಾ ಕೆ (ಅರ್ಜುನ್‌)–1. ಕಾಲ: 1.02.5 ನಿ, ಹಲೀಮಾ ಫಜಿಲತ್ (ಬಿಎಸ್‌ಸಿ)–2, ಶರಣ್ಯ ವಿ (ಬಿಎಸ್‌ಸಿ)–3. 14 ವರ್ಷದೊಳಗಿನ ಬಾಲಕರು: ಬಾಲ್‌ ಥ್ರೋ: ಅನ್ಶುಲ್ ಸಾಯ್ (ಬಿಎಸ್‌ಸಿ)–1. ದೂರ:54.64ಮೀ, ಅರ್ಣವ್ ನಾಯಕ್ (ಡಿವೈಇಎಸ್‌)–2, ನೀರಜ್‌ ಎಸ್‌ (ಎಲೈಟ್‌), ಅಂಜನ್ ವೈ.ಡಿ (ಆರ್‌ಎನ್‌ಎಸ್‌)–3; ಲಾಂಗ್ ಜಂಪ್‌: ಅಬೂಬಕ್ಕರ್ (ಎಲ್‌ಎಂಎಸ್‌)–1. ಅಂತರ:4.90 ಮೀ, ಆ್ಯರನ್‌ ಎಸ್‌ (ಎನ್‌ಸಿ)–2, ಜ್ಞಾನಾನಂದ ಡಿ (ಪ್ಯೂಜನ್‌)–3; 600 ಮೀ ಓಟ: ಮೋನಿಶ್ ಚಂದ್ರಶೇಖರ್ (ಬಿಎಸ್‌ಸಿಎ)–1. ಕಾಲ:1.39.2ಸೆ, ಆರ್ಯ (ಬಿಎಸ್‌ಸಿ)–2, ಲಿಖಿತ ಗೌಡ (ಜೆಸು)–3; ಬಾಲಕಿಯರು: ಬಾಲ್‌ ಥ್ರೋ: ದೀಪಿಕಾ ಎಸ್‌.ಟಿ (ಆರ್‌ಎನ್‌ಎಸ್‌ಐಎಸ್)–1. ದೂರ: 34.37 ಮೀ, ವಿಕ್ಟೋರಿಯಾ (ಆರ್‌ಎಂವಿ)–2, ರಮ್ಯಾ ಕಣ್ಣನ್ (ಬಿಎಸ್‌ಸಿ)–3; ಲಾಂಗ್ ಜಂಪ್: ಅದ್ವಿಕಾ ಆದಿತ್ಯ (ಬಿಎಸ್‌ಸಿ)–1. ಅಂತರ: 4.79 ಮೀ, ಕಸ್ತೂರಿ ವೇಳಂಕರ್‌ (ಬಿಎಸ್‌ಸಿ)–2, ಅಯನಾ ವಿನೋದ್ (ಅಂಜು ಬಾಬಿ)–3; 12 ವರ್ಷದೊಳಗಿನ ಬಾಲಕರು: 300 ಮೀ ಓಟ: ತೊಷಣ್ ನಾಯಕ್ (ಶ್ರೀರಾಂ ಗ್ಲೋಬಲ್ ಸ್ಕೂಲ್)–1. ಕಾಲ: 48.7ಸೆ, ಸುಧಾಂಶು ರಾವ್ (ಆರ್‌ಎನ್‌ಎಸ್‌ಐಎಸ್‌)–2, ಚಿರಾಗ್ ಗೌಡ (ಅಡ್ವೆಂಚರ್‌)–3; ಲಾಂಗ್ ಜಂಪ್‌: ಸಂಜಯ್ (ಸ್ವರಾಜ್‌)–1. ದೂರ: 3.89 ಮೀ, ಸಮನ್ಯು ಆರ್‌.ಡಿ (ವಿಎನ್‌ಎಸ್‌)–2, ಸಿದ್ಧಾರ್ಥ್‌ ನಾಯರ್ (ಬಿಎಸ್‌ಸಿ)–3; ಬಾಲಕಿಯರು: ಲಾಂಗ್‌ಜಂಪ್‌: ಅಭೀಪ್ಷಾ ಎಂ (ಬಿಎಸ್‌ಸಿ)–1. ದೂರ:3.52 ಮೀ, ಪೂರ್ವಿ ಉಮೇಶ್‌ (ಸ್ಪೀಡ್‌)–2, ಅದಿತಾ ಅಶ್ವಿನ್ (ಫ್ಯೂಜನ್‌)–3; 300 ಮೀ ಓಟ: ಚೇತನ ಭಾಸ್ಕರ್ (ಆರ್‌ವೈಎಸ್‌)–1. ಕಾಲ:47.6 ಸೆ, ಚೈತನ್ಯಾ ಮಂಜುನಾಥ್‌ (ಬಿಎಸ್‌ಸಿ)–2, ಅನೂಕ್ಷಾ ಪ್ರೇಮ್ ಕುಮಾರ್ (ವಿದ್ಯಾಶಿಪ್‌)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT