ಮಂಗಳವಾರ, ಜನವರಿ 28, 2020
29 °C

ಜೀನಾಗೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೋಪಾಲ್‌ (ಪಿಟಿಐ): ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಅಪೂರ್ವಿ ಚಾಂಡೇಲಾ ಮತ್ತು ಮೆಹುಲಿ ಘೋಷ್‌ ಅವರಿಗೆ ಆಘಾತ ನೀಡಿದ ಜೀನಾ ಖಿಟ್ಟಾ ಅವರು ರಾಷ್ಟ್ರೀಯ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಗುರುವಾರ ನಡೆದ ಮಹಿಳೆಯರ 10 ಮೀಟರ್ಸ್‌ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಜೀನಾ, ಈ ಸಾಧನೆ ಮಾಡಿದರು.

ಅರ್ಹತಾ ಹಂತದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದ ಜೀನಾ, ಎಂಟು ಮಂದಿ ಇದ್ದ ಫೈನಲ್‌ನಲ್ಲಿ ಅಮೋಘ ಸಾಮರ್ಥ್ಯ ತೋರಿದರು. 252.2 ಸ್ಕೋರ್‌ ಗಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿದರು.

250.5 ಸ್ಕೋರ್‌ ಗಳಿಸಿದ ಪಶ್ಚಿಮ ಬಂಗಾಳದ ಮೆಹುಲಿ ಅವರು ಬೆಳ್ಳಿಯ ಪದಕ ಪಡೆದರೆ, ಅಪೂರ್ವಿ (227.6) ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಅಪೂರ್ವಿ, ಶ್ರೇಯಾಂಕ ಸಾದಂಗಿ ಮತ್ತು ಗಾಯತ್ರಿ ಪಾವಸ್ಕರ್‌ ಅವರಿದ್ದ ಒಎನ್‌ಜಿಸಿ, 10 ಮೀಟರ್ಸ್‌ ಏರ್‌ ರೈಫಲ್‌ನ ತಂಡ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು