ಬೆಂಗಳೂರು: ದೆಹಲಿಯ ಕುಶಾಗ್ರ ರಾವತ್ ರಾಜ್ಯ ಈಜು ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನ ಮೂರನೇ ದಿನವೂ ದಾಖಲೆ ನಿರ್ಮಿಸಿದರು.

ಮೊದಲ ಎರಡು ದಿನ ದಾಖಲೆಗಳನ್ನು ನಿರ್ಮಿಸಿದ್ದ ಕರ್ನಾಟಕದ ಶ್ರೀಹರಿ ನಟರಾಜ್ ಗುರುವಾರ ಮತ್ತೊಂದು ಚಿನ್ನ ಗಳಿಸಿದರು. ರಾಜ್ಯದ ರಿಧಿಮಾ ಕೂಡ ಚಿನ್ನದ ಪದಕ ಗೆದ್ದುಕೊಂಡರು.

ಮೊದಲ ದಿನ 400 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಮತ್ತು ಬುಧವಾರ 800 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಕುಶಾಗ್ರ ಪಾರಮ್ಯ ಮೆರೆದಿದ್ದರು. ಗುರುವಾರ 1500 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಚಿನ್ನ ಗೆದ್ದು ತಮ್ಮದೇ ಹೆಸರಿನಲ್ಲಿದ್ದ ದಾಖಲೆ ಮುರಿದರು.

ಮೂರನೇ ದಿನದ ಫಲಿತಾಂಶಗಳು
ಪುರುಷರ 1500 ಮೀಟರ್ಸ್ ಫ್ರೀಸ್ಟೈಲ್: ಕುಶಾಗ್ರ ರಾವತ್ (ದೆಹಲಿ)–1. ಕಾಲ: 15:38.13 (ಕೂಟ ದಾಖಲೆ. ಹಿಂದಿನ ದಾಖಲೆ–ಕುಶಾಗ್ರ ರಾವತ್ 2019, ಭೋಪಾಲ್. ಕಾಲ:15:41.45), ಅನೀಶ್ ಎಸ್.ಗೌಡ (ಕರ್ನಾಟಕ)–2, ವೇದಾಂತ್ ಮಾಧವನ್ (ಮಹಾರಾಷ್ಟ್ರ)–3

200 ಮೀ ಬಟರ್‌ಫ್ಲೈ: ಸಜನ್ ಪ್ರಕಾಶ್ (ಪೊಲೀಸ್)–1. ಕಾಲ: 1:58.74, ಆರ್ಯನ್ ಪಾಂಚಾಲ್ (ಗುಜರಾತ್)–2, ಬಿಕ್ರಂ ಚಂಗ್ಮೈ (ಅಸ್ಸಾಂ)–3

50 ಮೀ ಫ್ರೀಸ್ಟೈಲ್: ಸಂಭವ್ ಆರ್ (ಕರ್ನಾಟಕ)–1. ಕಾಲ: 23.65, ಮಿಹಿರ್ ಆಮ್ರೆ (ಮಹಾರಾಷ್ಟ್ರ)–2, ಹೀರ್ ಶಾ (ಮಹಾರಾಷ್ಟ್ರ)–3

50 ಮೀ ಬ್ಯಾಕ್‌ಸ್ಟ್ರೋಕ್: ಶ್ರೀಹರಿ ನಟರಾಜ್ (ಕರ್ನಾಟಕ)–1. ಕಾಲ:25.77, ವಿನಾಯಕ ವಿಜಯ್ (ತೆಲಂಗಾಣ)–2, ಕ್ಷೇವಿಯರ್ ಮೈಕೆಲ್ ಡಿ‘ಸೋಜಾ (ಗೋವಾ)–3

ಮಹಿಳೆಯರ 800 ಮೀಟರ್ಸ್ ಫ್ರೀಸ್ಟೈಲ್: ಪ್ರಾಚಿ ಟೋಕಾಸ್ (ದೆಹಲಿ)–1. ಕಾಲ: 9:20.16, ಅನನ್ಯಾ ವಾಲ (ಮಹಾರಾಷ್ಟ್ರ)–2, ವೃತ್ತಿ ಅಗರವಾಲ್ (ತೆಲಂಗಾಣ)–3

200 ಮೀಬಟರ್‌ಫ್ಲೈ: ಆಸ್ತಾ ಚೌಧರಿ (ಅಸ್ಸಾಂ)–1. ಕಾಲ: 2:20.47, ಅಪೇಕ್ಷಾ ಫೆರ್ನಾಂಡಿಸ್ (ಮಹಾರಾಷ್ಟ್ರ)–2, ಶಕ್ತಿ ಬಾಲಕೃಷ್ಣನ್ (ತಮಿಳುನಾಡು)–3

50 ಮೀ ಫ್ರೀಸ್ಟೈಲ್: ಅವಂತಿಕಾ ಚವಾಣ್ (ಆರ್‌ಎಸ್‌ಪಿಬಿ)–1. ಕಾಲ: 27.18, ರುಜುತಾ ಖಾಡೆ (ಮಹಾರಾಷ್ಟ್ರ)–2, ಶಿವಾಂಗಿ ಸಮಾ (ಅಸ್ಸಾಂ)–3

50 ಮೀ ಬ್ರೆಸ್ಟ್‌ಸ್ಟ್ರೋಕ್: ರಿಧಿಮಾ ವೀರೇಂದ್ರ ಕುಮಾರ್ (ಕರ್ನಾಟಕ)–1. ಕಾಲ: 29.94, ಮಾನಾ ಪಟೇಲ್ (ಗುಜರಾತ್)–2, ನೀನಾ ವೆಂಕಟೇಶ್ (ಕರ್ನಾಟಕ)–3

4x100 ಮೀ ಮೆಡ್ಲೆ: ಮಹಾರಾಷ್ಟ್ರ–1. ಕಾಲ: 4:31.50, ಕರ್ನಾಟಕ (ರಿಧಿಮಾ, ಸಾನ್ವಿ ಎಸ್.ರಾವ್, ರಿಷಿಕಾ ಮಾಂಗ್ಲೆ, ನೀನಾ ವೆಂಕಟೇಶ್)–2, ಪಶ್ಚಿಮ ಬಂಗಾಳ–3

ವಾಟರ್ ಪೋಲೊ: ಕೇರಳಕ್ಕೆ ಮಿಶ್ರಫಲ
ನೆಟ್ಟಕಲ್ಲಪ್ಪ ಈಜುಕೇಂದ್ರದಲ್ಲಿ ನಡೆಯುತ್ತಿರುವ ವಾಟರ್ ಪೋಲೊ ಪಂದ್ಯಗಳ ಮಹಿಳೆಯರ ವಿಭಾಗದಲ್ಲಿ ಕೇರಳ ಮಿಶ್ರ ಫಲ ಕಂಡಿತು. ದಿನದ ಮೊದಲ ಪಂದ್ಯದಲ್ಲಿ ಮಹಾರಾಷ್ಟ್ರವನ್ನು 15–7ರಲ್ಲಿ ಮಣಿಸಿದ ಕೇರಳ ನಂತರ ಎರಡು ಪಂದ್ಯಗಳಲ್ಲಿ ಸೋತಿತು.

ಆರ್‌ಎಸ್‌ಪಿಬಿ ಎದುರಿನ ಪಂದ್ಯದಲ್ಲಿ 6–26ರಲ್ಲಿ ಸೋತ ತಂಡ ಎಸ್‌ಎಸ್‌ಸಿಬಿಗೆ 0–15ರಲ್ಲಿ ಮಣಿಯಿತು. ಕರ್ನಾಟಕ ತಂಡ ಪೊಲೀಸ್ ಎದುರಿನ ಹಣಾಹಣಿಯಲ್ಲಿ 8–18ರಲ್ಲಿ ಪರಾಭವಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.