ಶುಕ್ರವಾರ, ಜನವರಿ 27, 2023
27 °C

‘ಮಾ.31ರೊಳಗೆ ರಾಷ್ಟ್ರೀಯ ಟೇಕ್ವಾಂಡೊ ಆಯೋಜನೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2023ರ ಮಾ. 31ರೊಳಗೆ ರಾಷ್ಟ್ರೀಯ ಟೇಕ್ವಾಂಡೊ ಚಾಂಪಿಯನ್‌ಷಿಪ್‌ ನಡೆಸಲು ರಾಷ್ಟ್ರೀಯ ಫೆಡರೇಷನ್‌ನ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಭಾರತ ಟೇಕ್ವಾಂಡೊ ಫೆಡರೇಷನ್‌ ಅಧ್ಯಕ್ಷ ಇಶಾರಿ ಕೆ. ಗಣೇಶ್ ಅವರ ಅಧ್ಯಕ್ಷತೆಯಲ್ಲಿ ಇಲ್ಲಿಯ ಸೆಂಚುರಿ ಕ್ಲಬ್‌ನಲ್ಲಿ ಶನಿವಾರ ಕಾರ್ಯಕಾರಿ ಮಂಡಳಿ ಸಭೆ ನಡೆಯಿತು.

ರಾಷ್ಟ್ರೀಯ ಸಬ್ ಜೂನಿಯರ್, ಕೆಡೆಟ್ ಚಾಂಪಿಯನ್‌ಷಿಪ್‌, ರಾಷ್ಟ್ರೀಯ ಸೀನಿಯರ್ ಚಾಂಪಿಯನ್‌ಷಿಪ್‌ ನಡೆಸುವ ಜವಾಬ್ದಾರಿಯನ್ನು ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಪುದುಚೇರಿ ಸಂಸ್ಥೆಗಳಿಗೆ ಈ ಸಂದರ್ಭದಲ್ಲಿ ನೀಡಲಾಯಿತು.

ಹರಿಯಾಣ ಸಂಸ್ಥೆಯು ಮುಂದಿನ ಫೆಡರೇಷನ್ ಕಪ್ ಆಯೋಜಿಸುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ.

ಪ್ರಧಾನ ಕಾರ್ಯದರ್ಶಿ ಮಂಗೇಶ್ಕರ್, ಮುಖ್ಯ ಆಡಳಿತಾಧಿಕಾರಿ ಟಿ.ಪ್ರವೀಣ್ ಕುಮಾರ್, ರಾಷ್ಟ್ರೀಯ ತಂಡದ ಕೋಚ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಬಿ.ಎಮ್. ಕೃಷ್ಣಮೂರ್ತಿ ಅವರು ಸಭೆಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು