ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಅಥ್ಲೆಟಿಕ್ಸ್‌: ಭಾರತ ತಂಡಕ್ಕೆ ನೀರಜ್ ನಾಯಕ

Last Updated 30 ಜೂನ್ 2022, 16:20 IST
ಅಕ್ಷರ ಗಾತ್ರ

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜಾವೆಲಿನ್ ಅಥ್ಲೀಟ್ ನೀರಜ್ ಚೋಪ್ರಾ ಇದೇ ತಿಂಗಳು ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಸ್ಪರ್ಧಿಸುವ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಅಮೆರಿಕದ ಯುಗೇನ್‌ನಲ್ಲಿ ಜುಲೈ 15ರಿಂದ 24ರವರೆಗೆ ಕೂಟ ನಡೆಯಲಿದೆ. ಇದಕ್ಕಾಗಿ 22 ಅಥ್ಲೀಟ್‌ಗಳ ತಂಡವನ್ನು ಆಯ್ಕೆ ಮಾಡಲಾಗಿದೆ. ಗುರುವಾರ ಎಎಫ್‌ಐ ಪ್ರಕಟಿಸಿರುವ ತಂಡದಲ್ಲಿ 17 ಪುರುಷರು ಮತ್ತು ಐವರು ಮಹಿಳೆಯರು ಇದ್ದಾರೆ.

ರೇಸ್‌ ವಾಕರ್ ಭಾವನಾ ಜಾಟ್ ಮತ್ತು ಅನುಭವಿ ಡಿಸ್ಕಸ್‌ ಥ್ರೋ ಪಟು ಸೀಮಾ ಪೂನಿಯಾ ಅವರು ಕೂಟದಿಂದ ಹಿಂದೆ ಸರಿದಿದ್ದಾರೆ. ಕಾಮನ್‌ವೆಲ್ತ್‌ ಕ್ರೀಡಾಕೂಟದ ಸಿದ್ಧತೆಗಾಗಿ ಈ ನಿರ್ಣಯ ಕೈಗೊಂಡಿರುವುದಾಗಿಯೂ ಅವರು ಹೇಳಿದ್ದಾರೆ.

ತಂಡಗಳು
ಪುರುಷರು:
ನೀರಜ್ ಚೋಪ್ರಾ, ರೋಹಿತ್ ಯಾದವ್ (ಜಾವೆಲಿನ್ ಥ್ರೋ), ಅವಿನಾಶ್ ಸಬ್ಳೆ (3000ಮೀ ಸ್ಟೀಪಲ್‌ಚೇಸ್), ಎಂ.ಪಿ. ಜಬೀರ್ (400 ಮೀ ಹರ್ಡಲ್ಸ್), ಎಂ. ಶ್ರೀಶಂಕರ್ ಮತ್ತು ಮೊಹಮ್ಮದ್ ಅನಾಸ್ ಯಾಹ್ಯಾ (ಲಾಂಗ್‌ ಜಂಪ್), ಅಬ್ದುಲ್ ಅಬೂಬಕ್ಕರ್, ಪ್ರವೀಣ್ ಚಿತ್ರವೆಲ್, ಎಲ್ದೋಸ್ ಪಾಲ್ (ಟ್ರಿಪಲ್ ಜಂಪ್), ತಜಿಂದರ್ ಪಾಲ್ ಸಿಂಗ್ ತೂರ್ (ಶಾಟ್‌ಪಟ್), ಸಂದೀಪ್ ಕುಮಾರ್ (20 ಕಿ.ಮೀ ರೇಸ್ ವಾಕಿಂಗ್), ಅಮೋಜ್ ಜೇಕಬ್, ನೊಹಾ ನಿರ್ಮಲ್ ಟಾಮ್, ಮೊಹಮ್ಮದ್ ಅಜ್ಮಲ್, ನಾಗನಾಥನ್ ಪಾಂಡಿ, ರಾಜೇಶ್ ರಮೇಶ್, ಮೊಹಮ್ಮದ್ ಅನಾಸ್ ಯಾಹ್ಯಾ (4X400 ಮೀ ರಿಲೆ).

ಮಹಿಳೆಯರು: ಎಸ್‌ ಧನಲಕ್ಷ್ಮೀ (200 ಮೀ ಓಟ), ಐಶ್ವರ್ಯಾ ಕೈಲಾಶ್ ಮಿಶ್ರಾ (400 ಮೀ), ಪಾರುಲ್ ಚೌಧರಿ (3000ಮೀ ಸ್ಟೀಪಲ್‌ಚೇಸ್), ಅನು ರಾಣಿ (ಜಾವೆಲಿನ್ ಥ್ರೋ), ಪ್ರಿಯಾಂಕಾ ಗೋಸ್ವಾಮಿ (20 ಕಿ.ಮೀ ವಾಕಿಂಗ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT