ಬುಧವಾರ, ಜೂನ್ 16, 2021
27 °C
ಅಥ್ಲೀಟ್‌ಗಳಿಗೆ ಎಚ್ಚರಿಕೆ ನೀಡಿದ ಕೇಂದ್ರ ಕ್ರೀಡಾ ಸಚಿವ

ವಿದೇಶಗಳಲ್ಲಿನ ಕೋವಿಡ್‌ ನಿಯಮ ಉಲ್ಲಂಘಿಸಬೇಡಿ: ಕಿರಣ್ ರಿಜಿಜು

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಬೇರೆ ದೇಶಗಳಿಗೆ ತರಬೇತಿ ಅಥವಾ ಸ್ಪರ್ಧೆಗೆ ತೆರಳಿರುವ ಸಂದರ್ಭದಲ್ಲಿ ಅಲ್ಲಿ ಜಾರಿಯಲ್ಲಿರುವ ಕೋವಿಡ್‌ ತಡೆ ನಿಯಮಾವಳಿಗಳನ್ನು ಉಲ್ಲಂಘಿಸದಿರಿ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಭಾರತ ಅಥ್ಲೀಟ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಒಲಿಂಪಿಕ್ಸ್ ಅರ್ಹತೆ ಗಳಿಸಿರುವ ಭಾರತದ ಶೂಟರ್‌ಗಳು ಕ್ರೊವೇಷ್ಯಾ ಪ್ರವಾಸಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಅವರಿಗೆ ಶುಭ ಹಾರೈಸಿ ರಿಜಿಜು ಟ್ವೀಟ್ ಮಾಡಿದ್ದಾರೆ.

‘ಪ್ರಯಾಣ ಸುರಕ್ಷಿತವಾಗಿರಲಿ! ವಿದೇಶಗಳಲ್ಲಿರುವ ಕೋವಿಡ್‌ ತಡೆ ನಿಯಮಾವಳಿಗಳನ್ನು ಯಾವ ಕಾರಣಕ್ಕೂ ಉಲ್ಲಂಘಿಸಬೇಡಿ. ತರಬೇತಿ ಕಡೆಗೆ ಗಮನ ಕೊಡಿ. ನಮ್ಮ ಕ್ರೀಡಾಪಟುಗಳು ಮತ್ತು ಕೋಚ್‌ಗಳಿಗೆ ಅಗತ್ಯವಾದ ಎಲ್ಲ ರೀತಿಯ ನೆರವನ್ನು ನಾವು ಒದಗಿಸುತ್ತೇವೆ. ಶುಭವಾಗಲಿ‘ ಎಂದು ರಿಜಿಜು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಮಾಲ್ಡಿವ್ಸ್‌ನ ಮಾಲೆಯಲ್ಲಿ ನಡೆಯುತ್ತಿರುವ ಎಎಫ್‌ಸಿ ಕಪ್ ಫುಟ್‌ಬಾಲ್ ಟೂರ್ನಿ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ತಂಡದ ಆಟಗಾರರು ಕೋವಿಡ್ ನಿಯಮ ಉಲ್ಲಂಘಿಸಿದ್ದು ವರದಿಯಾಗಿತ್ತು. ಇದರಿಂದ ತಂಡವು ಆಡಬೇಕಿದ್ದ ಈಗಲ್ಸ್ ಎಫ್‌ಸಿ ಎದುರಿನ ಪಂದ್ಯವನ್ನು ಮುಂದೂಡಲಾಗಿತ್ತು. ಬಿಎಫ್‌ಸಿ ಇದಕ್ಕೆ ಕ್ಷಮೆ ಕೇಳಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ ರಿಜಿಜು ಹೇಳಿಕೆ ನೀಡಿದ್ದಾರೆ.

ಮಾಲ್ಡಿವ್ಸ್‌ನ ಕ್ರೀಡಾ ಸಚಿವ ಅಹಮದ್‌ ಮಹಲೂಫ್‌ ಅವರು ತಮ್ಮ ದೇಶವನ್ನು ತೊರೆಯುವಂತೆ ಬಿಎಫ್‌ಸಿ ತಂಡಕ್ಕೆ ಸೂಚಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು