ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟಿಂಗ್‌: ಒಲಿಂಪಿಕ್ಸ್‌ ಅರ್ಹತೆಗೆ ದೆಹಲಿ ವಿಶ್ವಕಪ್‌ ನಿರ್ಣಾಯಕ

Last Updated 16 ಸೆಪ್ಟೆಂಬರ್ 2020, 13:08 IST
ಅಕ್ಷರ ಗಾತ್ರ

ನವದೆಹಲಿ: ನವದೆಹಲಿಯಲ್ಲಿ ಮುಂದಿನ ವರ್ಷ ಮಾರ್ಚ್‌ನಲ್ಲಿ ನಡೆಯಲಿರುವವಿಶ್ವಕಪ್‌ ಶೂಟಿಂಗ್‌ ಟೂರ್ನಿಯು ಟೋಕಿಯೊ ಒಲಿಂಪಿಕ್ಸ್‌ ಅರ್ಹತೆಗೆ ನಿರ್ಣಾಯಕವಾಗಿದೆ ಎಂದು ಅಂತರರಾಷ್ಟ್ರೀಯ ಶೂಟಿಂಗ್‌ ಸ್ಪೋರ್ಟ್ ಫೆಡರೇಷನ್‌ (ಐಎಸ್‌ಎಸ್‌ಎಫ್‌) ಹೇಳಿದೆ.

ಜಪಾನ್‌ನ ರಾಜಧಾನಿ ಟೋಕಿಯೊದಲ್ಲಿ ಈ ವರ್ಷದ ಜುಲೈ–ಆಗಸ್ಟ್‌ನಲ್ಲಿ ನಿಗದಿಯಾಗಿದ್ದ ಒಲಿಂಪಿಕ್‌ ಕ್ರೀಡಾಕೂಟವು ಕೋವಿಡ್‌–19 ಹಿನ್ನೆಲೆಯಲ್ಲಿ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ.

ದೆಹಲಿಯಲ್ಲಿ ವಿಶ್ವಕಪ್‌ ಟೂರ್ನಿಯು 2021ರ ಮಾರ್ಚ್‌ 19ರಿಂದ 28ರವರೆಗೆ ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ನಡೆಯಲಿದೆ.

’ದೆಹಲಿಯಲ್ಲಿ ನಡೆಯಲಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್‌ ರೈಫಲ್‌/ಪಿಸ್ತೂಲ್‌/ಶಾಟ್‌ಗನ್‌ ಟೂರ್ನಿಯು ವಿಶ್ವ ರ‍್ಯಾಂಕಿಂಗ್‌ ಆಧಾರದಲ್ಲಿ ಟೋಕಿಯೊ ಒಲಿಂಪಿಕ್ಸ್‌ ಅರ್ಹತೆಗೆ ನಿರ್ಣಾಯಕವಾಗಿದೆ‘ ಎಂದು ವಿಶ್ವ ಶೂಟಿಂಗ್‌ ಮಂಡಳಿಯು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

‘ಕಾರ್ಯಕಾರಿ ಸಮಿತಿಯ ಈ ನಿರ್ಧಾರವು 2017ರಲ್ಲಿ ಅಂಗೀಕರಿಸಲ್ಪಟ್ಟ ಮೂಲ ಅರ್ಹತಾ ವ್ಯವಸ್ಥೆಯನ್ನು ಸಾಧ್ಯವಾದಷ್ಟು ನಿರ್ವಹಿಸುವುದರಅನುಸಾರವಾಗಿದೆ‘ ಎಂದೂ ಐಎಸ್‌ಎಸ್‌ಎಫ್‌ ತಿಳಿಸಿದೆ.

‘ಒಲಿಂಪಿಕ್‌ ಅರ್ಹತೆಯ ಕೊನೆಯ ಅವಧಿಗಿಂತ (ಜೂನ್‌ 6, 2021) ಮೊದಲು ನಡೆಯುವ ಎಲ್ಲ ವಿಶ್ವ ಚಾಂಪಿಯನ್‌ಷಿಪ್‌ಗಳ ಮೂಲಕ ಒಲಿಂಪಿಕ್ಸ್‌ಗೆ ಕನಿಷ್ಠ ಅರ್ಹತಾ ಸ್ಕೋರ್‌ ಗಳಿಸಬಹುದು‘ ಎಂದು ಐಎಸ್‌ಎಸ್‌ಎಫ್‌ ವಿವರಿಸಿದೆ.

ಐಎಸ್‌ಎಸ್‌ಎಫ್‌ನ ಕ್ಯಾಲೆಂಡರ್‌ ಪ್ರಕಾರ ದಕ್ಷಿಣ ಕೊರಿಯಾ (ಚಾಂಗ್ವಾನ್‌), ಅಜರ್‌ಬೈಜಾನ್‌ (ಬಾಕು), ಈಜಿಪ್ಟ್‌ (ಕೈರೊ) ಹಾಗೂ ಇಟಲಿಗಳಲ್ಲಿ (ಲೊನಾಟೊ) 2021ರಲ್ಲಿ ಶೂಟಿಂಗ್‌ ವಿಶ್ವಕಪ್‌ ಟೂರ್ನಿಗಳು ನಡೆಯಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT