ಚೆನ್ನೈ : ಭಾರತದ ಗ್ರ್ಯಾಂಡ್ಮಾಸ್ಟರ್ ನಿಹಾಲ್ ಸರಿನ್, ಮಹಿಳಾ ಅಂತರರಾಷ್ಟ್ರೀಯ ಮಾಸ್ಟರ್ ರಕ್ಷಿತಾ ರವಿ ಹಾಗೂ ಡಿ.ಗುಕೇಶ್ ಅವರು ಫಿಡೆ ಆನ್ಲೈನ್ವಿಶ್ವ ಯೂತ್ ಮತ್ತು ಕೆಡೆಟ್ ರ್ಯಾಪಿಡ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಮಂಗಳವಾರ ಚಿನ್ನದ ಪದಕ ಗೆದ್ದುಕೊಂಡರು.

ಸರಿನ್ (ಇಎಲ್ಒ ರೇಟಿಂಗ್ 2650) ಅವರು 18 ವರ್ಷದೊಳಗಿನವರ ಮುಕ್ತ ವಿಭಾಗದ ಫೈನಲ್ನಲ್ಲಿ 1.5– 0.5 ನಿಂದ ಅರ್ಮೇನಿಯಾದ ಗ್ರ್ಯಾಂಡ್ ಮಾಸ್ಟರ್ ಶಾಂತ್ ಸರ್ಗ್ಯಾನ್ ಅವರನ್ನು ಸೋಲಿಸಿದರು. 16 ವರ್ಷದೊಳಗಿನ ಬಾಲಕಿಯರ ಫೈನಲ್ನಲ್ಲಿ ರಕ್ಷಿತಾ ರವಿ ಇಷ್ಟೇ ಅಂತರದಿಂದ ಚೀನಾದ ಸಾಂಗ್ ಯೂಕ್ಸಿನ್ ಅವರ ಸವಾಲು ಮೀರಿದರು.

14 ವರ್ಷದೊಳಗಿನವರ ಫೈನಲ್ ಹಣಾಹಣಿಯಲ್ಲಿ ಗುಕೇಶ್ 2–1ರಿಂದ ರಷ್ಯಾದ ವೊಲೊಡಾರ್ ಮುರ್ಜಿನ್ ಎದುರು ಗೆದ್ದರು.

10 ವರ್ಷದೊಳಗಿವರ ವಿಭಾಗದಲ್ಲಿ ಹಲವು ಅವಕಾಶಗಳನ್ನು ಕೈಚೆಲ್ಲಿದ ಮೃಣ್ಮಯ್ ರಾಜ್ಕೋವಾ, ಸೆಮಿಫೈನಲ್ನಲ್ಲಿ ಅಮೆರಿಕದ ಆ್ಯಂಡಿ ವುಡ್ವರ್ಡ್ ಎದುರು ಸೋತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.